ADVERTISEMENT

ಪುಷ್ಪಮಾಲಾ, ಗುರುರಾಜ್‌ಗೆ ‘ವರದರಾಜು ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 14:27 IST
Last Updated 8 ಫೆಬ್ರುವರಿ 2026, 14:27 IST
ಪುಷ್ಪಮಾಲಾ ಎ. ಅಣ್ಣಿಗೇರಿ
ಪುಷ್ಪಮಾಲಾ ಎ. ಅಣ್ಣಿಗೇರಿ   

ಬೆಂಗಳೂರು: ಎಸ್‌.ಪಿ. ವರದರಾಜು ಬಳಗ ನೀಡುವ ‘ಎಸ್.ಪಿ. ವರದರಾಜು ಪ್ರಶಸ್ತಿ’ಗೆ ಈ ಬಾರಿ ರಂಗಭೂಮಿ ಕ್ಷೇತ್ರದಿಂದ ಕಲಾವಿದೆ ಪುಷ್ಪಮಾಲಾ ಎ. ಅಣ್ಣಿಗೇರಿ ಮತ್ತು ಚಲನಚಿತ್ರ ಕ್ಷೇತ್ರದಿಂದ ನಿರ್ದೇಶಕ ಗುರುರಾಜ್ ಆಯ್ಕೆಯಾಗಿದ್ದಾರೆ.

ನಟ ರಾಜ್‌ಕುಮಾರ್ ಅವರ ಸೋದರ ಎಸ್.ಪಿ. ವರದರಾಜು ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ₹10 ಸಾವಿರ ನಗದು ಒಳಗೊಂಡಿದೆ. ಬಳಗವು ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಿದೆ. ಪುಷ್ಪಮಾಲಾ ಅವರು ಏಳನೆ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದ್ದರು. ಹಲವು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಗುರುರಾಜ್ ಅವರು ಚಿತ್ರರಂಗದಲ್ಲಿ ನಿರ್ಮಾಣ, ನಿರ್ವಹಣೆ ಸೇರಿ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಇಲ್ಲಿನ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇದೇ 14ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಚಲನಚಿತ್ರ ನಟಿಯರಾದ ಅಂಬಿಕಾ, ಗೀತಾ ಹಾಗೂ ನಟ ರಾಮಕೃಷ್ಣ ಅವರು ಅತಿಥಿಗಳಾಗಿ ಭಾಗವಹಿಸುತ್ತಾರೆ. ಮಂಜುಳಾ ಗುರುರಾಜ್ ಅವರು ರಾಜ್‌ಕುಮಾರ್ ಅವರ ಚಿತ್ರಗೀತೆಗಳನ್ನು ಹಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT
ಗುರುರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.