ADVERTISEMENT

ಕ್ಯೂಪಿಎಲ್‌ ಎರಡನೇ ಆವೃತ್ತಿ ಇಂದಿನಿಂದ: ಸೆಲೆಬ್ರಿಟಿಗಳನ್ನು ಒಳಗೊಂಡ ತಂಡಗಳು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 0:25 IST
Last Updated 10 ನವೆಂಬರ್ 2025, 0:25 IST
Queens Premier League
Queens Premier League   

ಬೆಂಗಳೂರು: ಕೆಎಸ್‌ಎಸ್‌ ಇನ್‌ಪ್ರಾ ಪ್ರಸ್ತುತಪಡಿಸುತ್ತಿರುವ ‌ಕ್ವೀನ್ಸ್ ಪ್ರೀಮಿಯರ್ ಲೀಗ್‌ 2 (ಕ್ಯೂಪಿಎಲ್‌) ಕ್ರೀಡೋತ್ಸವ ಸೋಮವಾರ ಆರಂಭವಾಗಲಿದೆ. ಎಂಕೆಜೆ ಎಂಟರ್‌ಟೇನ್‌ಮೆಂಟ್‌ ಆಯೋಜಿಸುತ್ತಿರುವ ಕ್ಯೂಪಿಎಲ್‌ನಲ್ಲಿ ಸೆಲೆಬ್ರಿಟಿ ನಾಯಕಿಯರೊಂದಿಗೆ 10 ತಂಡಗಳು ಭಾಗವಹಿಸಲಿವೆ.

ನವೆಂಬರ್ 10ರಂದು ಸೆಂಟ್ರಲ್‌ ಕಾಲೇಜಿನ ಬೇಸ್‌ ಕ್ಯಾಂಪ್‌ನಲ್ಲಿ, 11ರಂದು ಮಾರತ್ತಹಳ್ಳಿಯ ಇ–ಝೋನ್‌ನಲ್ಲಿ ಪೂರ್ವಭಾವಿ ಸುತ್ತುಗಳೊಂದಿಗೆ ಈ ಲೀಗ್ ಆರಂಭವಾಗಲಿದೆ. ನ.12 ರಿಂದ 15ರವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯ ಸುತ್ತಿನ ಲೀಗ್ ನಡೆಯಲಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು ನೆಚ್ಚಿನ ಸಿನಿ ತಾರೆಯನ್ನು ಹುರಿದುಂಬಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ. 12 ವಿವಿಧ ಆಟಗಳಿವೆ.

ಎರಡನೇ ಆವೃತ್ತಿಗೆ ಸಿನಿಮಾ ತಾರೆ ರಮ್ಯಾ ಪ್ರಚಾರ ರಾಯಭಾರಿಯಾಗಿದ್ದಾರೆ. ಮಹೇಶ್‌ ಕುಮಾರ್ ಈ ಲೀಗ್‌ ಸ್ಥಾಪಿಸಿದ್ದು, ಪ್ರಮೋದ್ ಶೆಟ್ಟಿ, ಚೇತನ್ ಪಾರೀಕ್, ಸಂತೋಷ್ ಬಿಲ್ಲವ ಮತ್ತು ಪ್ರೇಮ್ ಸಾಗರ್ ಸಹ ಸ್ಥಾಪಕರಾಗಿದ್ದಾರೆ. ಕ್ರೀಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಆಚರಿಸುವುದು ಇದರ ಉದ್ದೇಶವಾಗಿದೆ.

ADVERTISEMENT

ಪಾಲ್ಗೊಳ್ಳುವ ತಂಡಗಳು: ಕಾರ್ತಿಕ್ ಶೇಖರ್, ವಿಕ್ರಮ್ ಪ್ರಭಾಕರ್ ಒಡೆತನದ ಚಿತ್ರದುರ್ಗ ಕ್ವೀನ್ಸ್‌ (ಸ್ಟಾರ್ ಕ್ಯಾಪ್ಟನ್‌: ರಾಧಿಕಾ ನಾರಾಯಣ್), ಸುರೇಶ್‌ ಗೌಡ ಮಾಲೀಕತ್ವದ ಶಿವಮೊಗ್ಗ ಕ್ವೀನ್ಸ್‌ (ಸ್ಟಾರ್ ಕ್ಯಾಪ್ಟನ್‌: ಭಾವನಾ ರಾವ್), ಸ್ವಸ್ತಿಕ್ ಆರ್ಯ, ಮಣಿಕಾಂತ್‌, ಗಿರೀಶ್‌ ಕೆ.ಎಲ್‌ ಒಡೆತನದ ಮಂಗಳೂರು ಕ್ವೀನ್ಸ್ (ಸ್ಟಾರ್ ಕ್ಯಾಪ್ಟನ್‌: ಪಾರ್ವತಿ ನಾಯರ್), ವಿಷ್ಣು ಶ್ರೀನಿವಾಸ ಮೂರ್ತಿ ಮಾಲೀಕತ್ವದ ಬೆಳಗಾವಿ ಕ್ವೀನ್ಸ್‌ (ಸ್ಟಾರ್ ಕ್ಯಾಪ್ಟನ್‌: ನಿಧಿ ಸುಬ್ಬಯ್ಯ), ರೂಪಾ ಒಡೆತನದ ಮೈಸೂರು ಕ್ವೀನ್ಸ್ (ಸ್ಟಾರ್ ಕ್ಯಾಪ್ಟನ್‌: ರಚನಾ ಇಂದರ್‌), ಶಶಾಂಕ್ ನಾರಾಯಣ ರೆಡ್ಡಿ ಒಡೆತನದ ಹುಬ್ಬಳ್ಳಿ ಕ್ವೀನ್ಸ್ (ಸ್ಟಾರ್ ಕ್ಯಾಪ್ಟನ್: ನೇಹಾ ಸಕ್ಸೇನಾ).‌

ಅರವಿಂದ್ ರೆಡ್ಡಿ ಒಡೆತನದ ಬಳ್ಳಾರಿ ಕ್ವೀನ್ಸ್‌ (ಸ್ಟಾರ್ ಕ್ಯಾಪ್ಟನ್‌: ಧನ್ಯಾ ರಾಮಕುಮಾರ್‌), ಮೊಹಮ್ಮದ್ ಜಾಫರ್ ಒಡೆತನದ ಬೆಂಗಳೂರು ಕ್ವೀನ್ಸ್‌ (ಸ್ಟಾರ್ ಕ್ಯಾಪ್ಟನ್: ಸಪ್ತಮಿ ಗೌಡ), ರೂಪಾ ಡಿ.ಎನ್‌. ಒಡೆತನದ ಹಾಸನ ಕ್ವೀನ್ಸ್ (ಸ್ಟಾರ್ ಕ್ಯಾಪ್ಟನ್‌: ಶಾನ್ವಿ ಶ್ರೀವಾಸ್ತವ), ವನಿತಾ ಲೋಕೇಶ್ ಒಡೆತನದ ಕೋಲಾರ ಕ್ವೀನ್ಸ್‌ (ನಾಯಕಿ: ಆಶಾ ಭಟ್‌).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.