ADVERTISEMENT

‘ಕ್ಷೇತ್ರದ ಅಭಿವೃದ್ಧಿಗೆ ಕ್ರಮ‘

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 17:35 IST
Last Updated 8 ಆಗಸ್ಟ್ 2021, 17:35 IST
ಯಶವಂತಪುರದ ಬಿಜೆಪಿ ಕಾರ್ಯಕರ್ತರು ತೋಟಗಾರಿಕೆ ಸಚಿವ ಮುನಿರತ್ನ ಅವರಿಗೆ ಅಭಿನಂದಿಸಿದರು. ಸೋಂಕು ಹರಡುವ ಅಪಾಯವಿದ್ದರೂ ಯಾರೂ ಅಂತರ ಕಾಯ್ದುಕೊಂಡಿರಲಿಲ್ಲ
ಯಶವಂತಪುರದ ಬಿಜೆಪಿ ಕಾರ್ಯಕರ್ತರು ತೋಟಗಾರಿಕೆ ಸಚಿವ ಮುನಿರತ್ನ ಅವರಿಗೆ ಅಭಿನಂದಿಸಿದರು. ಸೋಂಕು ಹರಡುವ ಅಪಾಯವಿದ್ದರೂ ಯಾರೂ ಅಂತರ ಕಾಯ್ದುಕೊಂಡಿರಲಿಲ್ಲ   

ರಾಜರಾಜೇಶ್ವರಿನಗರ: ‘ಉತ್ತರಹಳ್ಳಿ ಕ್ಷೇತ್ರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದಾಗ ಯಾವುದೇ ಮೂಲಸೌಲಭ್ಯಗಳಿರಲಿಲ್ಲ. ಅಭಿವೃದ್ಧಿಯಿಂದ ವಂಚಿತವಾಗಿತ್ತು. ಈಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮಾದರಿ ಕ್ಷೇತ್ರವನ್ನಾಗಿ ರೂಪಿಸಲಾಗುವುದು’ ಎಂದು ತೋಟಗಾರಿಕೆ ಸಚಿವ, ಕ್ಷೇತ್ರದ ಶಾಸಕ ಮುನಿರತ್ನ ಹೇಳಿದರು.

ಯಶವಂತಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಮೊದಲ ಬಾರಿ ಶಾಸಕನಾಗಿ ಅಭಿವೃದ್ದಿ ಕೆಲಸಮಾಡಲು ನೂರಾರು ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದರಿಂದ ಜನಪ್ರಿಯತೆ ಸಿಗಲು ಸಾಧ್ಯವಾಯಿತು’ ಎಂದರು.

ಬಿಜೆಪಿ ಮುಖಂಡ ಜಿ.ಕೆ.ವೆಂಕಟೇಶ್, ‘ಮುನಿರತ್ನ ಅವರು ಅಭಿವೃದ್ಧಿ ಕೆಲಸದ ಜೊತೆಗೆ ಬಡವರು, ಶೋಷಿತ ಜನಾಂಗದ ಪರವಾಗಿ ನಿಂತಿರುವುದರಿಂದ ನಾಯಕತ್ವ ಬೆಳೆಸಿಕೊಂಡು ಅಭಿವೃದ್ಧಿ ಕೆಲಸಮಾಡಲು ಸಾಧ್ಯವಾಯಿತು’ ಎಂದರು.

ADVERTISEMENT

ಬಿಜೆಪಿ ಮುಖಂಡ ವೇಲುನಾಯ್ಕರ್, ‘ಮುನಿರತ್ನ ಅವರು ನೂರಾರು ಜನರಿಗೆ ವಸತಿ ಕಲ್ಪಿಸಿಕೊಟ್ಟಿದರಿಂದ ನಾಗರಿಕರು ಅವರ ನಾಯಕತ್ವ ಗುರುತಿಸಿ ಅತ್ಯಧಿಕ ಮತಗಳಿಂದ ಶಾಸಕರಾಗಿ ಪುನರಾಯ್ಕೆ ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.

ನೂರಾರು ಜನ ಕಾರ್ಯಕ್ರಮದಲ್ಲಿ ಸೇರಿದ್ದರು. ಅಂತರ ಕಾಯ್ದುಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.