ADVERTISEMENT

‘ಆರ್‌.ವಿ ಸ್ಕಿಲ್ಸ್‌’ನಿಂದ ಕೌಶಲ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 19:48 IST
Last Updated 11 ಸೆಪ್ಟೆಂಬರ್ 2019, 19:48 IST
   

ಬೆಂಗಳೂರು: ವಿದ್ಯಾರ್ಥಿಗಳಿಗೆ ಉದ್ಯಮಗಳ ಬಗ್ಗೆ ಕೌಶಲ ತರಬೇತಿ ನೀಡಲು ಆರ್‌.ವಿ ಇನ್‌ಸ್ಟಿಟ್ಯೂಟ್‌, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ಹಾಗೂ ನ್ಯಾನೊಚಿಪ್ ಸಲ್ಯೂಷನ್ಸ್‌ ಸಹಯೋಗದಲ್ಲಿ ‘ಆರ್‌.ವಿ ಸ್ಕಿಲ್ಸ್‌’ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

‘ಈ ಕಾರ್ಯಕ್ರಮದ ಅನ್ವಯ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌), ಮೆಷಿನ್‌ ಲರ್ನಿಂಗ್‌ (ಎಂಎಲ್‌), ಆಟೊಮೋಟಿವ್‌ ಎಲೆಕ್ಟ್ರಾನಿಕ್ಸ್‌ (ಎಇ) ವಿಷಯಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಆರ್‌.ವಿ ಸ್ಕಿಲ್ಸ್‌ ಸಮೂಹ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾ
ಅಧಿಕಾರಿ ವೆಂಕಟೇಶ್‌ ಪ್ರಸಾದ್‌ ತಿಳಿಸಿದರು.

‘ಸಿದ್ಧಾಂತಗಳ ಬೋಧನೆಗಿಂತ ಪ್ರಯೋಗಾತ್ಮಕ ಅಂಶಗಳು ವಿದ್ಯಾರ್ಥಿಗಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಹೀಗಾಗಿ, ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಗೆ ಶೇ 75ರಷ್ಟು ತರಬೇತಿ ನೀಡಲಾಗುವುದು. ಇದರಿಂದ ಸಾಕಷ್ಟು ಲಾಭವಾಗಲಿದೆ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ ಅಧ್ಯಕ್ಷ ಎಂ.ಕೆ.ಪಾಂಡುರಂಗ ಶೆಟ್ಟಿ ತಿಳಿಸಿದರು.

ADVERTISEMENT

ಹೆಚ್ಚಿನ ಮಾಹಿತಿಗೆ www.rv.skills.com ಅಥವಾ ಮೊ.ಸಂಖ್ಯೆ–9900580442.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.