ADVERTISEMENT

ರೈಲು ನಿಲ್ದಾಣದಲ್ಲಿ ತುರ್ತು ಆರೋಗ್ಯ ತಪಾಸಣಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:59 IST
Last Updated 29 ಮೇ 2019, 19:59 IST

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತುರ್ತು ವೈದ್ಯಕೀಯ ಸೇವೆ ದೊರಕಿಸಲು ರೈಲ್ವೆ ಇಲಾಖೆ ಉಚಿತ ಆರೋಗ್ಯ ತಪಾಸಣಾ ಕೇಂದ್ರ ತೆರೆದಿದೆ.

ಪ್ರಯಾಣಿಕರು ರಕ್ತದೊತ್ತಡ, ಹೃದಯಾಘಾತ ಸೇರಿ ಯಾವುದೇಸಮಸ್ಯೆಗೆ ಒಳಗಾದರೂ ಚಿಕಿತ್ಸೆ ಪಡೆಯಬಹುದು. ಒಂದನೇ ಪ್ಲ್ಯಾಟ್‌ಫಾರಂ ಬಳಿ ಈ ಕೇಂದ್ರವಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ರೈಲಿನಲ್ಲೇ ಅಥವಾ ಬೇರೆ ಫ್ಲ್ಯಾಟ್‌ಫಾಂನಲ್ಲಿ ಪ್ರಯಾಣಿಕರು ಅಸ್ವಸ್ಥರಾದರೆ ಅವರನ್ನು ಕೇಂದ್ರಕ್ಕೆ ತರಲು ಬ್ಯಾಟರಿ ಚಾಲಿತ ವಾಹನವಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ನಿಲ್ದಾಣದಲ್ಲಿರುವ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುವುದು ಎಂದುನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್ ತಿಳಿಸಿದರು.

ADVERTISEMENT

ನೈರುತ್ಯ ರೈಲ್ವೆ ಕಳೆದ ವರ್ಷ ಪರಿಚಯಿಸಿದ್ದ ಯುಟಿಎಸ್(ಅನ್ ರಿಸರ್ವಡ್ ಟಿಕೆಟಿಂಗ್ ಸಿಸ್ಟಂ) ಆ್ಯಪ್‍ಗೆ ಉತ್ತಮ ಸ್ಪಂದನೆ ದೊರೆತಿದೆ. ಬೆಂಗಳೂರು ವಿಭಾಗದಲ್ಲಿ 2019ರ ಏಪ್ರಿಲ್‍ನಲ್ಲಿ 4.21 ಲಕ್ಷ ಪ್ರಯಾಣಿಕರು ಆ್ಯಪ್ ಬಳಸಿ ಟಿಕೆಟ್ ಪಡೆದಿದ್ದಾರೆ. 2018-19ರಲ್ಲಿ ಒಟ್ಟು 31 ಲಕ್ಷ ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.