ADVERTISEMENT

ವಿದ್ಯುತ್ ತಂತಿ ಮೇಲೆ ಬಿದ್ದ ಕೊಂಬೆ: ರೈಲು ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 22 ಮೇ 2019, 20:00 IST
Last Updated 22 ಮೇ 2019, 20:00 IST

ಬೆಂಗಳೂರು: ಬಿರುಗಾಳಿ ಮತ್ತು ಮಳೆಯಿಂದಾಗಿ ಮರದ ಕೊಂಬೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ– ಯಶವಂತಪುರ ರೈಲು ನಿಲ್ದಾಣಗಳ ನಡುವೆ ವಿದ್ಯುತ್ ಚಾಲಿತ ರೈಲುಗಳ ಸಂಚಾರ55 ನಿಮಿಷಸ್ಥಗಿತಗೊಂಡಿತು.

‘ಬುಧವಾರ ಸಂಜೆ5.15ರ ಸುಮಾರಿಗೆ ಎರಡು ನಿಲ್ದಾಣಗಳ ನಡುವೆ ವಿದ್ಯುತ್ ಮಾರ್ಗದಲ್ಲಿ ದೋಷ ಕಂಡು ಬಂತು.ಕೂಡಲೇ ಅಧಿಕಾರಿಗಳ ತಂಡ ದೋಷ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತು. ಯಶವಂತಪುರ ಯಾರ್ಡ್ ಬಳಿಯ ವಿದ್ಯುತ್ ತಂತಿಯ ಮೇಲೆ ಕೊಂಬೆ ಬಿದ್ದಿತ್ತು. ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅದನ್ನು ತೆರವುಗೊಳಿಸಿ 6.10ರ ವೇಳೆಗೆ ಸಮಸ್ಯೆ ಸರಿಪಡಿಸಲಾಯಿತು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ‘ಮೈಸೂರು–ಬೆಂಗಳೂರು ರಾಜ್ಯರಾಣಿ ಎಕ್ಸ್‌ಪ್ರೆಸ್‌, ಮೈಸೂರು ಕಾಚಿಗುಡ ಎಕ್ಸ್‌ಪ್ರೆಸ್‌, ಗೋಲಗುಂಬಜ್ ಎಕ್ಸ್‌ಪ್ರೆಸ್, ಮೈಸೂರು– ಮೈಲಾಡುತುರೈ ಎಕ್ಸ್‌ಪ್ರೆಸ್‌ ಸೇರಿ ಹಲವು ರೈಲುಗಳು ವಿಳಂಬವಾಗಿ ಚಲಿಸಿದವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT