ADVERTISEMENT

ಬೆಂಗಳೂರು: ನಗರದ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 20:22 IST
Last Updated 20 ಮಾರ್ಚ್ 2022, 20:22 IST
ನಗರದ ಬಳ್ಳಾರಿ ರಸ್ತೆಯಲ್ಲಿ ಭಾನುವಾರ ಸುರಿದ ಮಳೆಯಲ್ಲಿ ವಾಹನ ಸವಾರರು ಸಾಗಿದರು   –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.-
ನಗರದ ಬಳ್ಳಾರಿ ರಸ್ತೆಯಲ್ಲಿ ಭಾನುವಾರ ಸುರಿದ ಮಳೆಯಲ್ಲಿ ವಾಹನ ಸವಾರರು ಸಾಗಿದರು   –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.-   

ಬೆಂಗಳೂರು: ನಗರದ ಹಲವುಪ್ರದೇಶಗಳಲ್ಲಿ ಭಾನುವಾರ ಸಂಜೆ ಮಳೆ ಸುರಿಯಿತು. ನಗರದಲ್ಲಿ ಶನಿವಾರ ಸಂಜೆಯೂ ಉತ್ತಮ ಮಳೆಯಾಗಿತ್ತು.

ಸತತ ಎರಡು ದಿನವೂ ಮಳೆಯಾಗಿದ್ದರಿಂದ ನಗರದ ವಾತಾವರಣ ತುಸು ತಂಪಾಗಿದೆ.ಬೇಸಿಗೆಯ ಬೇಗೆಯಿಂದ ಬಳಲಿದ್ದ ನಗರದ ಜನತೆಗೆ ಈ ಮಳೆ ನೆಮ್ಮದಿ ತಂದಿದೆ. ‌

ನಗರದ ಹಲವು ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಂಡುಬಂತು. ಬೆಳಿಗ್ಗೆಯಿಂದಲೇ ತಂಪಿನ ಗಾಳಿಯೂ ಬೀಸುತ್ತಿತ್ತು. ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಮಧ್ಯಾಹ್ನದ ವೇಳೆ ಜೋರು ಗಾಳಿ ಬೀಸಲಾರಂಭಿಸಿತ್ತು. ಸಂಜೆ ವೇಳೆ ಹಲವೆಡೆ ತುಂತುರು ಮಳೆಯಾಯಿತು. ಕೆಲವೆಡೆ, ಅಬ್ಬರದ ಮಳೆಯಾಯಿತು.

ADVERTISEMENT

ರಾಜಾಜಿನಗರ, ವಿಜಯನಗರ, ಯಶವಂತಪುರ, ಬಾಗಲಗುಂಟೆ, ಪೀಣ್ಯ, ವಿದ್ಯಾರಣ್ಯಪುರ, ಜಾಲಹಳ್ಳಿ, ಗೊರಗುಂಟೆಪಾಳ್ಯ. ಲಗ್ಗೆರೆ ಹಾಗೂ ಬೆಂಗಳೂರು ಉತ್ತರ ಭಾಗದ ಬಹುತೇಕ ಕಡೆ ಮಳೆ ಸುರಿಯಿತು.

‘ಜೋರಾಗಿ ಬೀಸಿದ್ದ ಗಾಳಿಯಿಂದ ಕೆಲವೆಡೆ ಮರದ ಕೊಂಬೆಗಳು ಬಿದ್ದಿದ್ದವು. ಸ್ಥಳೀಯರ ಜೊತೆ ಸೇರಿ ಸಿಬ್ಬಂದಿ ಕೊಂಬೆಗಳನ್ನು ತೆರವು ಮಾಡಿದ್ದಾರೆ. ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.