ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನಲ್ಲಿ ಶನಿವಾರ ಸಂಜೆ ಕೆಲ ಹೊತ್ತು ಜೋರು ಮಳೆ ಸುರಿಯಿತು.
ಸೋಂಪುರ ಭಾಗದಲ್ಲಿ ಸಂಜೆ 5 ಗಂಟೆಗೆ ಆರಂಭವಾದ ಮಳೆ ಎರಡು ತಾಸು ರಭಸವಾಗಿ ಸುರಿಯಿತು. ಬೆಳಿಗ್ಗೆಯಿಂದ ಬಿಸಿಲ ವಾತಾವರಣ ಇತ್ತು, ಸಂಜೆ ಗುಡುಗು ಸಹಿತ ಮಳೆಯಾಯಿತು. ಇದರಿಂದ ಕಾಲುವೆಗಳಲ್ಲಿ ನೀರು ಹರಿದಿದ್ದು, ಕೆರೆಗೆ ಒಂದಷ್ಟು ನೀರು ಬಂದಿದೆ. ತಗ್ಗು ಪ್ರದೇಶಗಳಲ್ಲಿ ಹಾಗೂ ಹೊಲಗಳಲ್ಲಿಯೂ ನೀರು ನಿಂತಿದೆ.
‘ಒಂದು ತಿಂಗಳ ಮಳೆಯಿಂದ ಬೇಸಾಯ ಮಾಡಲು ಆಗದೆ, ಬಿಸಿಲು ಬಂದು ಕುಂಟೆ ಇತರ ಬೇಸಾಯ ಮಾಡಿಕೊಳ್ಳುವ ವೇಳೆಗೆ ಮಳೆ ಬಂದಿದೆ. ಇವತ್ತು ಕುಂಟೆ ಹೊಡೆಸಿದೆವು ಮಳೆ ಬಂದು ಎಲ್ಲಾ ಹಾಳಾಯ್ತು' ಎಂದು ಅಳಲು ತೋಡಿಕೊಂಡರು ರೈತ ಗಂಗಯ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.