ADVERTISEMENT

ಚಿನ್ನಾಭರಣ ದೋಚಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 19:34 IST
Last Updated 7 ಜೂನ್ 2019, 19:34 IST
ಬಂಧಿತ ಆರೋಪಿಗಳು ಹಾಗೂ ಪೊಲೀಸರು
ಬಂಧಿತ ಆರೋಪಿಗಳು ಹಾಗೂ ಪೊಲೀಸರು   

ಬೆಂಗಳೂರು: ರಾಜಾಜಿನಗರದ 3ನೇ ಹಂತದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ, ನಗದು ದರೋಡೆ ಮಾಡಿದ್ದ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರನಗರದಕೆ.ಭಾಸ್ಕರ್, ಬಿ.ಆರ್.ಶಶಿಧರ್, ಎನ್‌.ಆನಂದ್, ಆರ್‌.ಟಿ.ನಗರದ ಮದನ್ ಅಲಿಯಾಸ್ ಅನೀಶ್ ಕುಮಾರ್, ಪ್ರಕಾಶನಗರದ ಎಂ.ರಂಗನಾಥ್, ಸೂರಿ ಅಲಿಯಾಸ್ ಡಿ.ಸುರೇಶ್, ಸಂತು ಅಲಿಯಾಸ್ ಕ್ಯಾಪ್,ರಾಜಾಜಿನಗರದರಮೇಶ್ ಕುಮಾರ್, ಶ್ರೀರಾಮಪುರದ ಸುರೇಶ್, ಮಲ್ಲೇಶ್ವರದ ಕೆ. ಕಿರಣ್ ಕುಮಾರ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ.

‘ರಿಯಲ್ ಎಸ್ಟೇಟ್ ಉದ್ಯಮಿ ಎನ್‌.ಗಿರಿಧರ್ ಅವರು ಮೇ 12ರಂದು ಕುಟುಂಬ ಸಮೇತ ಮನೆಯಿಂದ ಹೊರಗಡೆ ಹೋಗಿದ್ದರು. ನಸುಕಿನ ಅವಧಿಯಲ್ಲಿ ಅವರ ಮನೆಯ ಗೇಟ್ ಹಾಗೂ ಬಾಗಿಲು ಮುರಿದು ಆರೋಪಿಗಳು ಒಳ ನುಗ್ಗಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮನೆಯೊಳಗಿದ್ದ ಗೃಹೋಪಯೋಗಿ ವಸ್ತುಗಳು, ಚಿನ್ನಾಭರಣ, ನಗದು ಮತ್ತು ಕೆಲ ದಾಖಲಾತಿಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಆ ಸಂಬಂಧ ಗಿರಿಧರ್ ದೂರು ನೀಡಿದ್ದರು’ ಎಂದು ತಿಳಿಸಿದರು.

‘ಗಿರಿಧರ್ ಅವರು ಇತ್ತೀಚೆಗಷ್ಟೇ ಮನೆಯೊಂದನ್ನು ಖರೀದಿಸಿದ್ದಾರೆ. ಆ ಮನೆ ತಮಗೆ ಸೇರಿದ್ದು ಎಂದು ಕೆಲವರು ವಾದಿಸುತ್ತಿದ್ದಾರೆ. ಈಗ ಅವರೇ ಆರೋಪಿಗಳಿಗೆ ಹಣ ಕೊಟ್ಟು ದರೋಡೆ ಮಾಡಿಸಿರುವ ಸಾಧ್ಯತೆ ಇದೆ. ಪ್ರಮುಖ ಆರೋಪಿಗಳು ಸಿಕ್ಕ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.