ADVERTISEMENT

ರಾಜರಾಜೇಶ್ವರಿನಗರ: ಒಳಚರಂಡಿ ಕಾಮಗಾರಿಗೆ ಶಾಸಕ ಎಸ್‌.ಟಿ. ಸೋಮಶೇಖರ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:24 IST
Last Updated 22 ಮೇ 2025, 16:24 IST
ಎಸ್‌.ಟಿ. ಸೋಮಶೇಖರ್‌
ಎಸ್‌.ಟಿ. ಸೋಮಶೇಖರ್‌   

ರಾಜರಾಜೇಶ್ವರಿನಗರ: ಯಶವಂತಪುರ ವಿಧಾನಸಭೆ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಒಳಚರಂಡಿ ಕಾಮಗಾರಿಗೆ ಶಾಸಕ ಎಸ್‌.ಟಿ. ಸೋಮಶೇಖರ್‌ ಚಾಲನೆ ನೀಡಿದರು.

ಮುದ್ದಿನಪಾಳ್ಯ, ರಾಘವೇಂದ್ರ ಬಡಾವಣೆ, ಮುನೇಶ್ವರ ಬಡಾವಣೆ, ಅಂಜನಾನಗರ, ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ಆದಿತ್ಯ ಬಡಾವಣೆ, ವೀರಭದ್ರೇಶ್ವರನಗರ, ಸ್ಪೂರ್ತಿಲೇಔಟ್, ಅಂಜನಾನಗರ ಕೆಇಬಿ ರಸ್ತೆ, ಆಂಜನೇಯಸ್ವಾಮಿ ಟೆಂಪಲ್ ರಸ್ತೆ, ನಾಗರಹೊಳೆನಗರ, ಶ್ರೀನಿಧಿ ಲೇಔಟ್, ಏಕದಂತನಗರ, ತುಂಗಾನಗರ, ಹೇರೋಹಳ್ಳಿ, ಪ್ರಸನ್ನನಗರ, ವಿಘ್ನೇಶ್ವರನಗರ, ಟೆಲಿಕಾಂ ಲೇಔಟ್, ಗದ್ದೆಕಾನೆ, ಹೇರೋಹಳ್ಳಿ ನಿಸರ್ಗಲೇಔಟ್, ಕೆಎಸ್ ಆರ್ ಟಿಸಿ ಲೇಔಟ್, ಮಾದವನಗರ ವ್ಯಾಪ್ತಿಯಲ್ಲಿ ಡಾಂಬರೀಕರಣ ಕಾಮಗಾರಿಗಳು ಮತ್ತು ಹೇರೋಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 500 ಎಂ.ಎಂ. ವಿನ್ಯಾಸದ ಒಳಚರಂಡಿ ಪೈಪ್ ಅಳವಡಿಸುವ ಕಾಮಗಾರಿಗೆ ಆರಂಭವಾಯಿತು.

‘ಯಶವಂತಪುರ ಕ್ಷೇತ್ರದಲ್ಲಿ ಬಹುತೇಕ ಹೊಸ ಬಡಾವಣೆಗಳು, ಕಂದಾಯ ಲೇಔಟ್‌ಗಳು, ಗ್ರಾಮೀಣ ಪ್ರದೇಶಗಳಿದ್ದು, ಅಭಿವೃದ್ಧಿಗೆ ಎಷ್ಟು ಅನುದಾನ ತಂದರೂ ಸಾಲುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನವೋಲಿಸಿ ಇಲ್ಲಿನ ಸಮಸ್ಯೆ ಹೇಳಿಕೊಂಡಿದ್ದರಿಂದ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ’ ಎಂದು ಎಸ್.ಟಿ. ಸೋಮಶೇಖರ್‌ ತಿಳಿಸಿದರು.

ADVERTISEMENT

ಹೇರೋಹಳ್ಳಿ ಪ್ರಕಾಶ್, ಸೂರಿ, ಮಂಜು, ಶ್ರೀಧರ್ ಎಚ್, ವಕೀಲಸಿದ್ದಲಿಂಗಪ್ಪ, ಉಮಾ, ಹೇಮಾ, ವಾರ್ಡ್ ರಮೇಶ್, ಕೇಬಲ್ ಮಂಜು, ಶಶಿ, ಕೇಬಲ್ ರವಿ, ಉಮೇಶ, ದೇವೇಗೌಡ, ಎಂ.ಗಂಗರಾಜು, ಚಂದ್ರಣ್ಣ, ನಾಗವೇಣಿ, ಕಾವ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.