ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಲಹಾ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 19:46 IST
Last Updated 10 ಅಕ್ಟೋಬರ್ 2019, 19:46 IST

ಬೆಂಗಳೂರು: 2019ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಗಣ್ಯರ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅಧ್ಯಕ್ಷತೆಯಲ್ಲಿ 17 ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ.

ಪ್ರತಿ ವರ್ಷ ನ.1ರಂದು ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ. ಈ ನಿಟ್ಟಿನಲ್ಲಿ ಅರ್ಹರನ್ನು ಆಯ್ಕೆ ಮಾಡಲು ರಚಿಸಲಾದ ಸಮಿತಿಯಲ್ಲಿ ಪ್ರೊ. ದೊಡ್ಡರಂಗೇಗೌಡ, ಬಿ.ವಿ. ವಸಂತಕುಮಾರ್, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಬಾನಂದೂರು ಕೆಂಪಯ್ಯ, ನಿರುಪಮಾ ರಾಜೇಂದ್ರ,ಅಡ್ಡಂಡ ಕಾರ್ಯಪ್ಪ,ರಹೀಂ ಉಚ್ಚಿಲ, ಬಿ.ವಿ. ರಾಜಾರಾಮ್, ಶಾಂತರಾಮ್ ಸಿದ್ದಿ, ಟಿ.ಎಸ್. ನಾಗಾಭರಣ, ತಾರಾ ಅನೂರಾಧ,ಅಜಕ್ಕಳ ಗಿರೀಶ್ ಭಟ್, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಮಹದೇವ ಪ್ರಕಾಶ್, ಸಿ.ಎಸ್. ಕೃಷ್ಣ ಶೆಟ್ಟಿ ಹಾಗೂ ಕರಿಜಟ್ಟಿ ರುದ್ರಪ್ಪ ಸದಸ್ಯರಾಗಿದ್ದಾರೆ.

ಸಮಿತಿಯ ಸದಸ್ಯರ ಪಟ್ಟಿಯಲ್ಲಿ ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿ ಅವರ ಹೆಸರೂ ಇದೆ. ‘‌ಸಮಿತಿಯ ಸದಸ್ಯನಾಗಲು ನಾನು ಒಪ್ಪಿಕೊಂಡಿರಲಿಲ್ಲ. ಅದನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದೆ. ಆದರೂ ನನ್ನ ಹೆಸರನ್ನು ಸೇರಿಸಲಾಗಿದೆ. ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ಪದ್ಮರಾಜ ದಂಡಾವತಿ ಅವರು ‘‍ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.