ADVERTISEMENT

ರಾಮಯ್ಯ ವಿ.ವಿ.: ಗಮನ ಸೆಳೆದ ಪ್ರಾಜೆಕ್ಟ್‌ಗಳು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 19:03 IST
Last Updated 15 ಫೆಬ್ರುವರಿ 2019, 19:03 IST

ಬೆಂಗಳೂರು: ರಾಮಯ್ಯ ಯುನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳ ‘ಪ್ರಾಜೆಕ್ಟ್‌ ಪ್ರದರ್ಶನ’ ಆಯೋಜಿಸಲಾಗಿತ್ತು.

ಮೂರನೇ ವರ್ಷದ ಈ ಪ್ರದರ್ಶನದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಎಂಜಿನಿಯರಿಂಗ್‌, ಫಾರ್ಮಸಿ, ಆರ್ಟ್‌ ಆ್ಯಂಡ್‌ ಡಿಸೈನ್‌, ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಕಾಮರ್ಸ್‌, ವೈದ್ಯಕೀಯ ವಿಜ್ಞಾನ, ಹಾಸ್ಪಿಟಾಲಿಸಿ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಕೆಟರಿಂಗ್‌ ಟೆಕ್ನಾಲಜಿ ವಿಭಾಗಗಳ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು, 68 ಪ್ರಾಜೆಕ್ಟ್‌ಗಳ ಕುರಿತು ಮಾಹಿತಿ ನೀಡಿದರು.

ಪ್ರದರ್ಶನವನ್ನು ಉದ್ಘಾಟಿಸಿದ ವಿಜ್ಞಾನಿ ಉಪೇಂದ್ರ ಕುಮಾರ್‌ ಸಿಂಗ್‌, ‘ದೇಶದ ಹಿತಾಸಕ್ತಿಗಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಅಡೆತಡೆಗಳನ್ನು ತೊಡೆದು ಹಾಕಬೇಕು. ನಮ್ಮ ಪ್ರಗತಿಯಲ್ಲಿ ಸಂಸ್ಥೆಗಳ ನಡುವಿನ ಸಹಯೋಗ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ADVERTISEMENT

ಕಾನ್ಫಿಡೆಂಟ್‌ ಡೆಂಟಲ್‌ ಲ್ಯಾಬೊರೇಟರಿಯ ನಿರ್ದೇಶಕ ಡಾ.ಶಿವಶಂಕರ್‌ ಮಹಾದೇವನ್‌, ‘ದಂತ ವೈದ್ಯಕೀಯ ಎಂಬುದು ಹಲ್ಲುಗಳಿಗೆ ಮಾತ್ರ ಸಂಬಂಧಿಸಿದ್ದು ಎಂದು ಜನ ತಿಳಿದುಕೊಂಡಿದ್ದಾರೆ. ದಂತ ವೈದ್ಯರ ಕೆಲಸದಲ್ಲಿ ಶೇ 60 ರಷ್ಟು ಎಂಜಿನಿಯರಿಂಗ್‌ ಬೆರೆತುಕೊಂಡಿದೆ’ ಎಂದು ಹೇಳಿದರು.

ವಾಹನಗಳ ವಿಧವನ್ನು ಗುರುತಿಸುವ ವ್ಯವಸ್ಥೆ, ಶಸ್ತ್ರಚಿಕಿತ್ಸಕರು ಮತ್ತು ರೋಗಿಗಳ ಸುರಕ್ಷತೆ, ಔಷಧಿಗಳ ವಿಲೇವಾರಿ, ಮೆಡಿಕಲ್‌ ಟೂರಿಸಂ ಕುರಿತ ಪ್ರಾಜೆಕ್ಟ್‌ಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.