ಬೆಂಗಳೂರು: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವದ ನೆನಪಿಗೆ ಅವರ ಹೆಸರಿನಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಇಲ್ಲವೇ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಅವರ ಹೆಸರು ಇಡಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಆಗ್ರಹಿಸಿದ್ಧಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಿಂಧ್ಯ, ಹೆಗಡೆ ಅವರ ಹೆಸರಿನಲ್ಲಿ ಸಾರ್ವಜನಿಕ ನೀತಿ ಹಾಗೂ ಆಡಳಿತ ಅಕಾಡೆಮಿ ನಿರ್ಮಿಸಿ ಆಡಳಿತಗಾರರು ಹಾಗೂ ರಾಜಕಾರಣಿಗಳಿಗೆ ಹೆಗಡೆಯವರ ಆಡಳಿತ ತತ್ವಗಳ ಪರಿಚಯ ಮಾಡಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹೆಗಡೆಯವರ ಹೆಸರಿನಲ್ಲಿ ಶಾಶ್ವತ ಸ್ಮಾರಕ ಭವನ ಅಥವಾ ವಸ್ತು ಸಂಗ್ರಹಾಲಯ ಇಲ್ಲವೇ ಡಿಜಿಟಲ್ ಗ್ರಂಥಾಲಯಲ್ಲಿ ಅವರ ಭಾಷಣಗಳು, ಚಿಂತನೆಗಳು, ಜನಪರ ನೀತಿಗಳು ಸಿಗುವಂತೆ ಬೆಂಗಳೂರಿನಲ್ಲಿ ಜ್ಞಾನ ಕೇಂದ್ರ ಸ್ಥಾಪಿಸಬೇಕು. ಅವರ ಹೆಸರಿನಲ್ಲಿ ಗ್ರಾಮೀಣಾಭಿವೃದ್ದಿ ಯೋಜನೆ ರೂಪಿಸಿ ನಿರಂತರ ಜನಸೇವೆ ಮಾದರಿಯನ್ನು ಮುಂದುವರೆಸುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.