ADVERTISEMENT

ರಮಣಶ್ರೀ ಶರಣ ಪ್ರಶಸ್ತಿ: ಸಾಧಕರ ಶಿಫಾರಸಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 23:37 IST
Last Updated 24 ಸೆಪ್ಟೆಂಬರ್ 2025, 23:37 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನೀಡುವ ‘ರಮಣಶ್ರೀ ಶರಣ ಪ್ರಶಸ್ತಿ’ಗೆ ಸಾಧಕರ ಹೆಸರನ್ನು ಶಿಫಾರಸು ಮಾಡಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ತಲಾ ನಾಲ್ಕು ಹಿರಿಯ ಶ್ರೇಣಿ ಮತ್ತು ಉತ್ತೇಜನ ಶ್ರೇಣಿಯಲ್ಲಿ ‘ರಮಣಶ್ರೀ ಶರಣ ಪ್ರಶಸ್ತಿ’ ನೀಡಲಾಗುತ್ತಿದೆ. ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ, ಶರಣ ಸಂಸ್ಕೃತಿ ಪ್ರಸಾರ ಮತ್ತು ಸೇವಾ ಸಂಸ್ಥೆ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹಿರಿಯ ಶ್ರೇಣಿ ಪ್ರಶಸ್ತಿಗಳು ತಲಾ ₹ 40 ಸಾವಿರ ಮತ್ತು ಉತ್ತೇಜನ ಶ್ರೇಣಿ ಪ್ರಶಸ್ತಿಗಳು ತಲಾ ₹ 20 ಸಾವಿರ ಒಳಗೊಂಡಿವೆ. 

ಉತ್ತೇಜನ ಶ್ರೇಣಿಗೆ 45 ವರ್ಷದೊಳಗಿನವರು ಮಾತ್ರ ಅರ್ಹರಾಗಿರುತ್ತಾರೆ. ನಿಗದಿಪಡಿಸಲಾದ ನಾಲ್ಕು ವಿಭಾಗಗಳಲ್ಲಿ ಉನ್ನತಮಟ್ಟದ ಸಾಧನೆಗೈದಿರುವ ವ್ಯಕ್ತಿಗಳ ಹೆಸರನ್ನು ಇದೇ 30ರೊಳಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, ಜಯನಗರ 8ನೇ ವಿಭಾಗ, ಬೆಂಗಳೂರು 560070 ಅಥವಾ ಎಸ್. ಷಡಕ್ಷರಿ, ಅಧ್ಯಕ್ಷರು ರಮಣಶ್ರೀ ಪ್ರತಿಷ್ಠಾನ, ನಂ.16 ರಾಜಾರಾಮ್ ಮೋಹನ್ ರಾಯ್ ರಸ್ತೆ, ಬೆಂಗಳೂರು 560025 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಂಪರ್ಕಕ್ಕೆ: 9845032813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.