ADVERTISEMENT

ದಾಬಸ್ ಪೇಟೆ: ರಾಮದೇವರ ಬೆಟ್ಟದಲ್ಲಿ ಪ್ರಥಮ ಏಕಾದಶಿ ಪೂಜೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 15:59 IST
Last Updated 6 ಜುಲೈ 2025, 15:59 IST
ರಾಮದೇವರ ಫೋಟೊ ಹಾಗೂ ಪಾದುಕೆಗಳನ್ನು‌ ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಿರುವ ದೃಶ್ಯ
ರಾಮದೇವರ ಫೋಟೊ ಹಾಗೂ ಪಾದುಕೆಗಳನ್ನು‌ ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಿರುವ ದೃಶ್ಯ   

ದಾಬಸ್ ಪೇಟೆ: ಸೋಂಪುರ ಹೋಬಳಿಯ ರಾಮದೇವರ ಪಾದುಕೆ ಬೆಟ್ಟದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಭಾನುವಾರ ವಿಶೇಷ ಪೂಜೆ ನೆರವೇರಿತು.

ರಾಮ ಪಾದುಕೆಗಳಿಗೆ ಹಾಗೂ ರಾಮ-ಲಕ್ಷ್ಮಣ-ಸೀತೆ-ಹನುಮ ದೇವರ ಉತ್ಸವ ಮೂರ್ತಿಗೆ ಅಭಿಷೇಕ ನಡೆಯಿತು. ದೇವರನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಭಕ್ತರು ತಂದ ಹಲಸಿನ ಹಣ್ಣಿನ ಮಣೇವಿಗೆ ತೀರ್ಥ ಹಾಕಿ ಪೂಜೆ ಮಾಡಲಾಯಿತು. ಸುತ್ತಮುತ್ತಲ ಹಾಗೂ ಮನೆದೇವರ ನೂರಾರು ಭಕ್ತರು ಆಗಮಿಸಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.