ADVERTISEMENT

ಹಳೆಯ ರೈಲು ನಿಲ್ದಾಣ ಮರು ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 21:23 IST
Last Updated 26 ಫೆಬ್ರುವರಿ 2021, 21:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸ್ವಾತಂತ್ರ್ಯಪೂರ್ವದ ನಾಲ್ಕು ರೈಲ್ವೆ ನಿಲ್ದಾಣಗಳ ಪರಂಪರೆಯನ್ನು ಮರು ನಿರ್ಮಾಣದ ಕೆಲಸ ಆರಂಭವಾಗಿದ್ದು, ತಜ್ಞರು ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಳೀಯ ಪ್ರವಾಸಿ ತಾಣವಾಗಿಯೂ ನವೀಕರಣಗೊಳ್ಳುವ ನಿರೀಕ್ಷೆ ಇದೆ.

ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ಮತ್ತು ನಂದಿ ನಿಲ್ದಾಣಗಳನ್ನು ನವೀಕರಣ, ಮರು ನಿರ್ಮಾಣ ಮತ್ತು ಸಂರಕ್ಷಣೆಗೆ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟೆಕ್‌) ಜತೆ ಒಪ್ಪಂದಕ್ಕೆ ನೈರುತ್ಯ ರೈಲ್ವೆ ಸಹಿ ಹಾಕಿದೆ. ಈ ನಿಲ್ದಾಣಗಳಲ್ಲಿ ಕೆಲವು 1915ಕ್ಕೂ ಹಳೆಯ ನಿಲ್ದಾಣಗಳಿವೆ.

‘ಇವುಗಳ ಅಭಿವೃದ್ಧಿಗೆ ₹10 ಕೋಟಿ ಬೇಕಾಗಲಿದೆ. ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯ(ಸಿಎಸ್‌ಆರ್‌) ನಿಧಿ ಪಡೆಯಲಾಗುವುದು’ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ವರ್ಮಾ ತಿಳಿಸಿದರು.

ADVERTISEMENT

‘ಸಂಸ್ಕೃತಿ ಮತ್ತು ಪರಂಪರೆ ಸಂರಕ್ಷಣೆ ಜೊತೆಗೆ ಪ್ರವಾಸೋದ್ಯಮಕ್ಕೆ ಈ ಯೋಜನೆ ದಾರಿ ಮಾಡಿಕೊಡಲಿದೆ. ನವೀಕರಣ ಮತ್ತು ಮರು ನಿರ್ಮಾಣದ ಯೋಜನೆಯನ್ನು ಇಂಟೆಕ್‌ ಸಿದ್ಧಪಡಿಸಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.