ADVERTISEMENT

ಬೆಂಗಳೂರು ಜಲಮಂಡಳಿಯ ವಿವಿಧ ಹುದ್ದೆಗಳ‌‌ ನೇಮಕಾತಿ: ಪರೀಕ್ಷಾ ದಿನಾಂಕ ಬದಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 23:08 IST
Last Updated 9 ಡಿಸೆಂಬರ್ 2025, 23:08 IST
ಬೆಂಗಳೂರು ಜಲಮಂಡಳಿ ಲೋಗೋ
ಬೆಂಗಳೂರು ಜಲಮಂಡಳಿ ಲೋಗೋ   

ಬೆಂಗಳೂರು: ಬೆಂಗಳೂರು ಜಲಮಂಡಳಿಯ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗದ ಕಿರಿಯ ಎಂಜಿನಿಯರ್ ಹುದ್ದೆಗಳ‌‌ ನೇಮಕಾತಿಗೆ ಡಿ.20ರ ಬದಲು ಡಿ. 22ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು
ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.

ಇತರ ಎಲ್ಲ ಪರೀಕ್ಷೆಗಳು ನ.19ರಂದು ಹೊರಡಿಸಿದ ಆದೇಶದಂತೆ ಆಯಾ ದಿನಾಂಕಗಳಂದೇ
ನಡೆಯಲಿವೆ. ಆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಿ.20 ಮತ್ತು 22ರಂದು ನಡೆಯುವ ಪರೀಕ್ಷೆಗಳನ್ನು ಕೇವಲ ಬೆಂಗಳೂರು ನಗರದಲ್ಲಿ ಮಾತ್ರ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.