ADVERTISEMENT

‘ಫುಲ್ ಪೈಸಾ ವಸೂಲ್ ಸೇಲ್’ ಪ್ರಾರಂಭ

ರಿಲಯನ್ಸ್ ಫ್ರೆಷ್ ಮತ್ತು ರಿಲಯನ್ಸ್ ಸ್ಮಾರ್ಟ್‌ ಮಳಿಗೆಗಳಲ್ಲಿ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 21:51 IST
Last Updated 22 ಜನವರಿ 2020, 21:51 IST
   

ಬೆಂಗಳೂರು: ದೇಶದಾದ್ಯಂತ ರಿಲಯನ್ಸ್ ಫ್ರೆಷ್ ಮತ್ತು ರಿಲಯನ್ಸ್ ಸ್ಮಾರ್ಟ್‌ ಮಳಿಗೆಗಳಲ್ಲಿ ‘ಫುಲ್ ಪೈಸಾ ವಸೂಲ್ ಸೇಲ್’ ಪ್ರಾರಂಭವಾಗಿದ್ದು, ಈ ವಿಶೇಷ ರಿಯಾಯಿತಿ ಕೊಡುಗೆ ಜ.26ರವರೆಗೆ ಇರಲಿದೆ.

ತರಕಾರಿ, ಹಣ್ಣುಗಳು, ದಿನಸಿ,ಅಡುಗೆ ಪರಿಕರಗಳು, ಗೃಹೋಪಯೋಗಿ ಸೇರಿದಂತೆ ವಿವಿಧ ವಸ್ತುಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿರಿಲಯನ್ಸ್ ಫ್ರೆಷ್ ಹಾಗೂ ಸ್ಮಾರ್ಟ್ ಒದಗಿಸುತ್ತಿದೆ. ಎಲ್ಲ ವಸ್ತುಗಳಿಗೂ ಈ ಕೊಡುಗೆ ಅನ್ವಯವಾಗಲಿದೆ.

ರಿಲಯನ್ಸ್ ಫ್ರೆಷ್ ಹಾಗೂ ಸ್ಮಾರ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿದಾಮೋದರ್, ‘ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ನಾವು ಯಶಸ್ವಿಯಾಗಿದ್ದು, ಅವರ ಸಂತೋಷ ಹಾಗೂ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಇಂತಹ ಸಂಭ್ರಮಾಚರಣೆಗಳು ನಮ್ಮ ಗ್ರಾಹಕರನ್ನು ಸಂಪರ್ಕಿಸಲು ಸಹಾಯಕ’ ಎಂದರು.

ADVERTISEMENT

ಸಂಸ್ಥೆಯು ದೇಶದಲ್ಲಿ 700 ಮಳಿಗೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.