ADVERTISEMENT

ಚಿಮೂ ಸಂಶೋಧನೆಗಳು ಮಾಹಿತಿಪೂರ್ಣ: ಎಚ್.ದಂಡಪ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 3:45 IST
Last Updated 12 ಜನವರಿ 2021, 3:45 IST
ಕಾರ್ಯಕ್ರಮದಲ್ಲಿ ಎಂ.ಚಿದಾನಂದ ಮೂರ್ತಿ ಅವರ ಭಾವಚಿತ್ರಕ್ಕೆ (ಎಡದಿಂದ ಮೂರನೆಯವರು) ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಪುಷ್ಪನಮನ ಸಲ್ಲಿಸಿದರು. ಎಚ್.ದಂಡಪ್ಪ, ಸಂಶೋಧಕ ಆರ್.ಶೇಷಶಾಸ್ತ್ರಿ, ಕೆಎಸ್‍ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಹಾಗೂ ಇತರರು ಇದ್ದರು –ಪ್ರಜಾವಾಣಿ ಚಿತ್ರ 
ಕಾರ್ಯಕ್ರಮದಲ್ಲಿ ಎಂ.ಚಿದಾನಂದ ಮೂರ್ತಿ ಅವರ ಭಾವಚಿತ್ರಕ್ಕೆ (ಎಡದಿಂದ ಮೂರನೆಯವರು) ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಪುಷ್ಪನಮನ ಸಲ್ಲಿಸಿದರು. ಎಚ್.ದಂಡಪ್ಪ, ಸಂಶೋಧಕ ಆರ್.ಶೇಷಶಾಸ್ತ್ರಿ, ಕೆಎಸ್‍ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಹಾಗೂ ಇತರರು ಇದ್ದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಸಂಶೋಧನೆ ಎಂಬ ವಿಷಯ ಅತ್ಯಂತ ನೀರಸ. ಆದರೆ, ಎಂ.ಚಿದಾನಂದ ಮೂರ್ತಿ (ಚಿಮೂ) ಸಂಶೋಧನೆಗಳು ಮಾಹಿತಿ ಸಂಗ್ರಹ ಹಾಗೂ ವಿಶ್ಲೇಷಣೆಯಿಂದ ಕೂಡಿರುತ್ತಿತ್ತು. ಮಾಹಿತಿಪೂರ್ಣ ಮತ್ತು ಸ್ವಾರಸ್ಯಕರವಾಗಿಯೂ ಇರುತ್ತಿತ್ತು’ ಎಂದುವಿಮರ್ಶಕ ಎಚ್.ದಂಡಪ್ಪ ತಿಳಿಸಿದರು.

ಕನ್ನಡ ಗೆಳೆಯರ ಬಳಗವು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಎಂ.ಚಿದಾನಂದ ಮೂರ್ತಿ ಅವರ ವರ್ಷದ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಂಶೋಧನೆಗಳು ವರ್ತಮಾನಕ್ಕೆ ಪೂರಕವಾಗಿ ಇರದಿದ್ದರೆ, ಅವು ವ್ಯರ್ಥ. ಚಿಮೂ ಅವರ ಸಂಶೋಧನೆಗಳು ಹೊಸತನದೊಂದಿಗೆ ಕೂಡಿದ್ದು, ವರ್ತಮಾನಕ್ಕೆ ಪೂರಕವಾಗಿ ಇರುತ್ತಿದ್ದವು. ಭಾಷೆ, ಇತಿಹಾಸ, ಸಂಸ್ಕೃತಿಗೆ ಸಂಬಂಧಿಸಿದ ಸಮಗ್ರ ಸಂಶೋಧನೆಗಳಿಗೆ ಹೆಸರಾಗಿದ್ದರು’ ಎಂದರು.

ADVERTISEMENT

ವಿಡಿಯೊ ಸಂದೇಶದಲ್ಲಿ ಮಾತನಾಡಿದ ಸಚಿವ ಎಸ್‌.ಸುರೇಶ್‌ ಕುಮಾರ್, ‘ಚಿಮೂ ಅವರ ಸಂಶೋಧನೆಗಳಿಂದ ಹೊರಬಿದ್ದ ಅನೇಕ ಸತ್ಯಾಂಶಗಳು ನಮ್ಮನ್ನು ಎಚ್ಚರಿಸಿವೆ. ತಮ್ಮ ವ್ಯಕ್ತಿತ್ವದ ಭವಿಷ್ಯದ ಬಗ್ಗೆ ಲೆಕ್ಕಿಸದೆ, ಟಿಪ್ಪು ಸುಲ್ತಾನ್, ಹಂಪಿ ಸೇರಿದಂತೆ ಪ್ರಮುಖ ವಿಚಾರಗಳನ್ನು ಧೈರ್ಯವಾಗಿ ವ್ಯಕ್ತಪಡಿಸಿದ್ದರು’ ಎಂದರು.

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್,‘ಮೇ 10ರಂದು ಚಿಮೂ ಕುರಿತಾದ ಪುಸ್ತಕ ಹೊರತರಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಭಾಷಾ ವಿಜ್ಞಾನಿ ಕೆ.ಪಿ.ಭಟ್, ಸಂಶೋಧಕಿ ಉಷಾ ಕಿರಣ್, ಸಪ್ನ ಬುಕ್ ಹೌಸ್‌ನ ನಿತಿನ್‌ ಷಾ, ಕನ್ನಡ ಹೋರಾಟಗಾರ ರು.ಬಸಪ್ಪ, ರಾಮಕೃಷ್ಣ ಅವರಿಗೆ ‘ಚಿದಾನಂದಮೂರ್ತಿ ನೆನಪಿನ ಗೌರವ’ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.