ADVERTISEMENT

SWR: 116 ರೈಲುಗಳಿಗೆ ಮರುಸಂಖ್ಯೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 16:06 IST
Last Updated 18 ಡಿಸೆಂಬರ್ 2024, 16:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನೈರುತ್ಯ ರೈಲ್ವೆ ವಲಯದ 116 ಪ್ಯಾಸೆಂಜರ್‌ ರೈಲುಗಳಿಗೆ ಜನವರಿ 1ರಿಂದ ಮರುಸಂಖ್ಯೆ ನೀಡಲು ರೈಲ್ವೆ ನಿರ್ಧರಿಸಿದೆ.

ಪ್ಯಾಸೆಂಜರ್ ವಿಶೇಷ ರೈಲುಗಳನ್ನು ನಿಯಮಿತ ರೈಲು ಸಂಖ್ಯೆಗಳೊಂದಿಗೆ ಮರುಸಂಖ್ಯೆ ಮಾಡಲಾಗುತ್ತಿದೆ. ಅಸ್ತಿತ್ವದಲ್ಲಿರುವ ಆರಂಭಿಕ ಸಂಖ್ಯೆ ‘0’ಯ ಬದಲು ‘5’, ‘6’ ಅಥವಾ ‘7’ ರಿಂದ ಸಂಖ್ಯೆಗಳು ಆರಂಭವಾಗಲಿವೆ. ಪ್ರಯಾಣಿಕರು ಪರಿಷ್ಕೃತ ರೈಲು ಸಂಖ್ಯೆಗಳನ್ನು ಗಮನಿಸಬೇಕು‌ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.