ಗಣರಾಜ್ಯೋತ್ಸವ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಏಕತೆ, ಸೇವಾ ಮನೋಭಾವ ಮತ್ತು ಸಾಮೂಹಿಕ ಜವಾಬ್ದಾರಿಯು ರಾಷ್ಟ್ರೀಯತೆಯ ಹೆಗ್ಗುರುತು ಎಂಬುದನ್ನು ಗಣರಾಜ್ಯೋತ್ಸವ ನೆನಪಿಸುತ್ತದೆ’ ಎಂದು ಫಿನಿಕ್ಸ್ ಮಾಲ್ ಆಫ್ ಏಷ್ಯಾದ ಮಾರುಕಟ್ಟೆ ನಿರ್ದೇಶಕ (ದಕ್ಷಿಣ) ರಿತು ಮೆಹ್ತಾ ಅಭಿಪ್ರಾಯಪಟ್ಟರು.
ಗಣರಾಜ್ಯೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಿಪಬ್ಲಿಕ್ ರೈಮ್ಸ್, ರಿಪಬ್ಲಿಕ್ ರನ್, ಸೇನೆಯ ಸಿಬ್ಬಂದಿಯನ್ನು ಗೌರವಿಸುವ ಮೂಲಕ ವಿಶಿಷ್ಟವಾಗಿ ಗಣರಾಜೋತ್ಸವ ಆಚರಿಸಲಾಗಿದೆ. ಮಹಿಳೆಯರ ಉದ್ಯಮಶೀಲತೆಗೂ ಒತ್ತು ನೀಡಲಾಗಿದೆ ಎಂದರು.
ಶೌರ್ಯ ಪ್ರಶಸ್ತಿ ಪುರಸ್ಕೃತ ಕರ್ನಲ್ ಜೆ.ಬಿ.ಸಿಂಗ್ ಧ್ವಜಾರೋಹಣ ನೆರವೇರಿಸಿದರು. ರಿಪಬ್ಲಿಕ್ ರನ್ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಗಣರಾಜ್ಯೋತ್ಸವ ಗೀತೆಗಳ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಮಹಿಳಾ ಉದ್ಯಮಿಗಳಿಂದ ವಸ್ತುಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಕರಕುಶಲ ವಸ್ತುಗಳು, ಸೀರೆಗಳು, ಬೇಕರಿ ಉತ್ಪನ್ನಗಳು, ಸೌಂದರ್ಯ ವರ್ಧಕಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.