ADVERTISEMENT

ಸಾಧಕರಿಗೆ ರೇವಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:21 IST
Last Updated 7 ಜನವರಿ 2020, 19:21 IST
ಕಸ್ತೂರಿ ರಂಗನ್ ಅವರಿಗೆ ‘ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಚಿತ್ರ ನಿರ್ದೇಶಕ ರಾಘವೇಂದ್ರರಾವ್, ರೇವಾ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಪಿ.ಶ್ಯಾಮರಾಜು, ಕುಲಪತಿ ಡಾ.ಎಸ್.ವೈ.ಕುಲಕರ್ಣಿ ಇದ್ದರು
ಕಸ್ತೂರಿ ರಂಗನ್ ಅವರಿಗೆ ‘ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಚಿತ್ರ ನಿರ್ದೇಶಕ ರಾಘವೇಂದ್ರರಾವ್, ರೇವಾ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಪಿ.ಶ್ಯಾಮರಾಜು, ಕುಲಪತಿ ಡಾ.ಎಸ್.ವೈ.ಕುಲಕರ್ಣಿ ಇದ್ದರು   

ಯಲಹಂಕ: ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನದ ಅಂಗವಾಗಿ ಸಾಧಕರಿಗೆ ‘ರೇವಾ ಜೀವಮಾನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ರಾಜಸ್ಥಾನದ ಸೆಂಟ್ರಲ್‌ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ. ಕಸ್ತೂರಿ ರಂಗನ್‌, ಚಿತ್ರನಿರ್ದೇಶಕ ಕೆ. ರಾಘವೇಂದ್ರ ರಾವ್‌ ಅವರಿಗೆ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ ಹಾಗೂ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ. ಸತೀಶ್‌ ರೆಡ್ಡಿ ಅವರಿಗೆ ‘ರೇವಾ ಎಕ್ಸ್‌ಲೆನ್ಸ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಸ್ತೂರಿ ರಂಗನ್, ‘ದೇಶದ ಅಭಿವೃದ್ಧಿಯಲ್ಲಿ ಸಂಶೋಧನೆಗಳು ಮಹತ್ತರ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ನೂತನ ಸಂಶೋಧನೆಗಳು ಹಾಗೂ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು. ಆ ಮೂಲಕ ನಮ್ಮ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ADVERTISEMENT

ರಾಘವೇಂದ್ರರಾವ್‌ ಅವರು, ಸಿನಿಮಾರಂಗದಲ್ಲಿ ತಮ್ಮ 50 ವರ್ಷಗಳ ಪಯಣದ ಅನುಭವವನ್ನು ಹಂಚಿಕೊಂಡರು.

ರೇವಾ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಪಿ.ಶ್ಯಾಮರಾಜು, ಕುಲಪತಿ ಡಾ.ಎಸ್.ವೈ.ಕುಲಕರ್ಣಿ, ಕುಲಸಚಿವ ಡಾ.ಎಂ.ಧನಂಜಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.