ADVERTISEMENT

ರೇವಾ: ಎಜುಕೇಟ್ ಟು ಎಂಟರ್‌ಪ್ರೈಸ್’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 21:37 IST
Last Updated 15 ಫೆಬ್ರುವರಿ 2026, 21:37 IST
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು, ‘ಎಜುಕೇಟ್ ಟು ಎಂಟರ್‌ಪ್ರೈಸ್’ ಕಾರ್ಯಕ್ರಮವನ್ನು ಅನಾವರಣಗೊಳಿಸಿದರು. ಎಂ.ಧನಂಜಯ, ಬೀನಾ.ಜಿ, ಜೆ.ಬಿ.ಸಿಂಹ, ಗೌರವ್ ಯಾದವ್ ಇದ್ದರು.
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು, ‘ಎಜುಕೇಟ್ ಟು ಎಂಟರ್‌ಪ್ರೈಸ್’ ಕಾರ್ಯಕ್ರಮವನ್ನು ಅನಾವರಣಗೊಳಿಸಿದರು. ಎಂ.ಧನಂಜಯ, ಬೀನಾ.ಜಿ, ಜೆ.ಬಿ.ಸಿಂಹ, ಗೌರವ್ ಯಾದವ್ ಇದ್ದರು.   

ಯಲಹಂಕ: ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ರೇವಾ ವಿಶ್ವವಿದ್ಯಾಲಯವು ‘ಎಜುಕೇಟ್ ಟು ಎಂಟರ್‌ಪ್ರೈಸ್‌’ ಎಂಬ ಶೈಕ್ಷಣಿಕ ಕಾರ್ಯಕ್ರಮ ಆರಂಭಿಸಿದೆ.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ನೇತೃತ್ವದ ತಂಡವು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ʼರೇವಾ ರೈಸ್‌ʼ ಎಂಬ ಸ್ಕಾಲರ್‌ಶಿಪ್ ಉಪಕ್ರಮವನ್ನೂ ಪರಿಚಯಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಶ್ಯಾಮರಾಜು,‘ಎಜುಕೇಟ್ ಟು ಎಂಟರ್‌ಪ್ರೈಸ್ʼ ಎಂಬುದು ಕೇವಲ ಉದ್ಯಮಿಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಉದ್ಯಮಶೀಲ ಮನೋಭಾವ ಬೆಳೆಸಲಿದೆ. ವಿದ್ಯಾರ್ಥಿಗಳ ಅವಕಾಶ ಗುರುತಿಸಿ ಸುಸ್ಥಿರ ಪರಿಹಾರ ರೂಪಿಸಲು ಉತ್ತೇಜಿಸಲಾಗುವುದು. ಉದ್ಯಮ, ಸಂಶೋಧನೆ, ಆಡಳಿತ, ಸೃಜನಾತ್ಮಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೂ ಇದು ಸಹಕಾರಿಯಾಗಲಿದೆ’ ಎಂದರು.

ADVERTISEMENT

ಕುಲಸಚಿವ ಡಾ.ಎಂ.ಧನಂಜಯ ಮಾತನಾಡಿ, ‘ಸಾಮಾಜಿಕ ಬದಲಾವಣೆ ಮತ್ತು ಉದ್ಯಮದ ಅಗತ್ಯಗಳಿಗೆ ಸ್ಪಂದಿಸುವಂತೆ ಈ ಕಾರ್ಯಕ್ರಮದಡಿ ಪಠ್ಯಕ್ರಮವನ್ನು ಪುನರ್‌ ರಚಿಸಲಾಗಿದೆ. ವಿದ್ಯಾರ್ಥಿಗಳು ನೈಜ ಜಗತ್ತಿಗೆ ಸಿದ್ಧರಾಗಲು ಅಗತ್ಯ ಕೌಶಲಗಳನ್ನು ಪಡೆಯುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.