ADVERTISEMENT

ಏರಿದ ತರಕಾರಿ ಬೆಲೆ: ಖರೀದಿಸಲು ಗ್ರಾಹಕರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 16:31 IST
Last Updated 28 ಜೂನ್ 2023, 16:31 IST
ದಾಬಸ್ ಪೇಟೆಯ ಸಂತೆಯಲ್ಲಿ ವ್ಯಾಪಾರಸ್ಥರು ಮಾರಾಟಕ್ಕೆ ಇಟ್ಟಿದ್ದ ತರಕಾರಿ
ದಾಬಸ್ ಪೇಟೆಯ ಸಂತೆಯಲ್ಲಿ ವ್ಯಾಪಾರಸ್ಥರು ಮಾರಾಟಕ್ಕೆ ಇಟ್ಟಿದ್ದ ತರಕಾರಿ   

ದಾಬಸ್ ಪೇಟೆ: ಶುಂಠಿ ಕೆಜಿಗೆ ₹ 240, ಹಸಿ ಮೆಣಸಿನಕಾಯಿ ₹100, ಟೊಮೆಟೊ ₹80, ಕ್ಯಾರಟ್ ₹80, ಬದನೆಕಾಯಿ ₹ 60, ಕೊತ್ತಂಬರಿ ದಪ್ಪ ಕಟ್ಟಿಗೆ ₹ 50, ಸೌತೆಕಾಯಿ 1ಕ್ಕೆ ₹10, ಮಿಕ್ಸ್ ತರಕಾರಿ ₹ 60.   ಇದು ದಾಬಸ್ ಪೇಟೆ ಸಂತೆಯಲ್ಲಿ ಬುಧವಾರದ ವಹಿವಾಟು. 

ಹೀರೆಕಾಯಿ, ಮೂಲಂಗಿ, ಗೆಡ್ಡೆಕೋಸು, ಬೀಟ್‌ರೂಟ್, ಬೆಂಡೆಕಾಯಿ, ಕೋಸು ತರಕಾರಿಗಳ ಬೆಲೆಯು ₹ 30–₹40 ಆಸುಪಾಸಿನಲ್ಲಿ ಇತ್ತು. ಇದರಿಂದ ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕಿದರು.

ತರಕಾರಿ ಅನಿವಾರ್ಯವಾಗಿದ್ದರಿಂದ ಹೆಚ್ಚು ಬೆಲೆ ನೀಡಿ ಕಡಿಮೆ ಪ್ರಮಾಣದಲ್ಲಿ ಕೊಂಡೊಯ್ದರು. ಮುಂಗಾರು ಮಳೆ ಸಕಾಲಕ್ಕೆ ಆಗದೆ ಇರುವುದು, ಬಿಸಿಲ ತಾಪಮಾನ ಹೆಚ್ಚಾಗಿರುವುದು ಹಾಗೂ ವಿಪರೀತ ಶೀತ ಗಾಳಿ ಬೀಸುತ್ತಿರುವುದು ತರಕಾರಿ ಇಳುವರಿಯಲ್ಲಿ ಕುಸಿತ ಕಂಡಿರುವುದು ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ADVERTISEMENT

ಈಗಾಗಲೇ ಬೇಳೆ, ಅಕ್ಕಿ ದಿನಸಿ ಪದಾರ್ಥಗಳ ಬೆಲೆ ಏರಿದೆ. ಅದರ ಮಧ್ಯೆ ತರಕಾರಿ ಬೆಲೆಯು ಹೆಚ್ಚಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಗ್ರಾಹಕರಾದ ಇಂದ್ರಮ್ಮ ಅಳಲು ತೋಡಿಕೊಂಡರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.