ಕೃಷ್ಣಬೈರೇಗೌಡ
ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದರು.
ಕೊಡಿಗೇಹಳ್ಳಿಯ ಬಾಲಾಜಿ ಬಡಾವಣೆ, ವಿದ್ಯಾರಣ್ಯಪುರದ ವೆಂಕಟಸ್ವಾಮಪ್ಪ ಬಡಾವಣೆ, ಗುರುದರ್ಶನ ಬಡಾವಣೆ, ಬಸವಸಮಿತಿ ಬಡಾವಣೆ, ಸಹಕಾರನಗರ, ಕೆನರಾಬ್ಯಾಂಕ್ ಬಡಾವಣೆ, ಎಂಸಿಇಸಿಎಚ್‌ಎಸ್ ಬಡಾವಣೆ ಹಾಗೂ ಕೆಂಪಾಪುರದ ಚೌಳರಪ್ಪ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕ್ಷೇತ್ರವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಈ ಹಿಂದೆ ಅಭಿವೃದ್ಧಿಪಡಿಸಿದ್ದ ರಸ್ತೆಗಳು ಕಾವೇರಿ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಲು ಕೈಗೊಂಡಿದ್ದ ಕಾಮಗಾರಿ ಹಾಗೂ ಭಾರೀ ಮಳೆಯಿಂದ ಹಾಳಾಗಿ ವಾಹನಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ದಿಸೆಯಲ್ಲಿ ಸ್ಥಳೀಯ ನಿವಾಸಿಗಳ ಮನವಿಯ ಮೇರೆಗೆ ರಸ್ತೆಗಳ ಅಭಿವೃದ್ಧಿ ಮತ್ತು ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯರಾದ ಪಿ.ವಿ.ಮಂಜುನಾಥಬಾಬು, ಲಕ್ಷ್ಮೀಹರಿ, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ವಿ.ಹರಿ, ಕೆ.ಆರ್.ರಾಜು, ವೆಂಕಟಸ್ವಾಮಿ, ಎಚ್.ಎ.ಶಿವಕುಮಾರ್, ವಿಶ್ವ, ಕೆ.ದಿಲೀಪ್‌ಕುಮಾರ್, ಹನುಮಂತಿ, ತಿಂಡ್ಲು ಸತೀಶ್, ಕೆ.ಮಂಜುನಾಥ್, ಶಾಂತಮ್ಮ, ಟಿ.ರಮೇಶ್, ಕಾರ್ಣಿಕ್ ರಾಜ್, ರಾಮಚಂದ್ರಪುರ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.