ADVERTISEMENT

ರೋಬೊಟಿಕ್ ತಂತ್ರಜ್ಞಾನ: ಮಂಡಿ ಚಿಪ್ಪು ಬದಲಾವಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 19:58 IST
Last Updated 25 ನವೆಂಬರ್ 2020, 19:58 IST

ಬೆಂಗಳೂರು: ರೋಬೊಟಿಕ್ ತಂತ್ರಜ್ಞಾನದ ನೆರವಿನಿಂದ ಭಾಗಶಃ ಹಾಗೂ ಸಂಪೂರ್ಣ ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ನಡೆಸುವುದಾಗಿ ಅಪೋಲೊ ಆಸ್ಪತ್ರೆ ಘೋಷಿಸಿದೆ.

ಕೋವಿಡ್ ಕಾರಣ ಆಸ್ಪತ್ರೆಯು ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಮನೆಯಲ್ಲಿಯೇ ಆರೈಕೆಯನ್ನು ಒದಗಿಸಲು ನಿರ್ಧರಿಸಿದೆ. ಮೊಬೈಲ್ ಆ್ಯಪ್ ನೆರವಿನಿಂದ ವೈದ್ಯರೊಂದಿಗೆ ಸಮಾಲೋಚನೆ ನಡೆಸುವ ವ್ಯವಸ್ಥೆಯನ್ನೂ ರೂಪಿಸಿದೆ.

‘ರೋಬೊಟ್‌ಗಳ ಸಹಾಯದಿಂದ ನಡೆಸುವ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ಅತ್ಯಂತ ನಿಖರವಾಗಿರುತ್ತದೆ. ಸಣ್ಣದಾಗಿ ರಂಧ್ರ ಮಾಡುವುದರಿಂದ ಗಾಯ ಮತ್ತು ನೋವಿನ ತೀವ್ರತೆ ಕಡಿಮೆ ಇರಲಿದೆ. ಸಂಕೀರ್ಣ ಸ್ವರೂಪದ ಶಸ್ತ್ರಚಿಕಿತ್ಸೆಗಳನ್ನೂ ಅತ್ಯಂತ ನಿಖರವಾಗಿ ನಡೆಸಬಹುದಾಗಿದೆ. ಸಣ್ಣ ಪ್ರಮಾಣದಲ್ಲಿ ಗಾಯವಾಗುವುದರಿಂದ ವ್ಯಕ್ತಿಯು ಬೇಗ ಚೇತರಿಸಿಕೊಳ್ಳುತ್ತಾನೆ. ದೇಶದ ಶೇ 22ರಿಂದ ಶೇ 39 ರಷ್ಟು ಜನರಿಗೆ ಅಸ್ಥಿ ಸಂಧಿವಾತದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ’ ಎಂದು ಅಪೋಲೊ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ತಿಳಿಸಿದರು.

ADVERTISEMENT

‘ಕೊವಿಡ್ ಕಾರಣ ಕೆಲವರು ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿಯೇ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಸೇವೆ ನೀಡಲು ಮುಂದಾಗಿದ್ದೇವೆ. ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿಯು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದಾಗಿದೆ’ ಎಂದು ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ. ಸಂಜಯ್ ಪೈ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.