ADVERTISEMENT

ಗಾಯಿತ್ರಿ ‘ಅತ್ಯುತ್ತಮ ಶಿಕ್ಷಕಿ’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 21:30 IST
Last Updated 7 ಮಾರ್ಚ್ 2021, 21:30 IST
ರೋಟರಿ ಬೆಂಗಳೂರು ಇಂದಿರಾನಗರದ ಅಧ್ಯಕ್ಷ ಎ.ವಿ.ಎಸ್.ಶ್ರೀಕಾಂತ್, ಕೊಡವ ಸಮಾಜ ಹಾಗೂ ಶ್ರೀ ಕಾವೇರಿ ಶಾಲೆಯ ಅಧ್ಯಕ್ಷ ಸಿ.ಪಿ.ಚಿಟ್ಟಿಯಪ್ಪ, ಉದ್ಯಮಿ ಒ.ಪಿ.ಖನ್ನಾ ಅವರು ಗಾಯಿತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಕಾವೇರಿ ಶಾಲೆಯ ಪ್ರಾಂಶುಪಾಲರಾದ ಮೋನಿಕಾ ಮೈಕಲ್‌ ಇದ್ದಾರೆ.

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿರೋಟರಿ ಇಂದಿರಾನಗರ ನೀಡುವ 2020–21ನೇ ಸಾಲಿನ ‘ಜಿ.ಎಸ್‌.ಖನ್ನಾ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿಗೆ ಇಂದಿರಾನಗರದ ಕಾವೇರಿ ಶಾಲೆಯ ಆರ್‌.ಗಾಯಿತ್ರಿ ಪಾತ್ರರಾಗಿದ್ದಾರೆ.

ಭಾನುವಾರ ನಡೆದ ಸಮಾರಂಭದಲ್ಲಿ ಗಾಯಿತ್ರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿಂದಿನ ಒಂದು ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಾಯಿತ್ರಿ, 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ವಿಧಾನಗಳ ಮೂಲಕ ಬೋಧನೆ ಮಾಡಿ ಶಾಲೆಯು ಉತ್ತಮ ಫಲಿತಾಂಶ ಪಡೆಯಲು ನೆರವಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.