ADVERTISEMENT

ಪುಕ್ಕಟ್ಟೆಯಾಗಿ ಸಿಗರೇಟ್ ಕೊಡಲಿಲ್ಲ ಎಂದು ಬೇಕರಿಗೆ ನುಗ್ಗಿ ಗಲಾಟೆ: ರೌಡಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಮೇ 2025, 22:30 IST
Last Updated 30 ಮೇ 2025, 22:30 IST
ಅಪ್ಪಿ 
ಅಪ್ಪಿ    

ಬೆಂಗಳೂರು: ಪುಕ್ಕಟ್ಟೆಯಾಗಿ ಟೀ ಮತ್ತು ಸಿಗರೇಟ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ತಾವರೆಕೆರೆ ಮುಖ್ಯ ರಸ್ತೆಯ ಕೃಷ್ಣಮೂರ್ತಿ ಲೇಔಟ್‍ನ ಬೇಕರಿಗೆ ನುಗ್ಗಿ ಗಲಾಟೆ ಮಾಡಿದ್ದ ರೌಡಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಶ್ವತ್ಥ್ ಅಲಿಯಾಸ್ ಅಪ್ಪಿ (23)ಬಂಧಿತ ಆರೋಪಿ.

ಮೇ 26ರಂದು ಎಸ್.ಜಿ.ಬೇಕರ್ಸ್ ಆ್ಯಂಡ್ ಜ್ಯೂಸ್ ಸೆಂಟರ್‌ಗೆ ಬಂದಿದ್ದ ಆರೋಪಿ ಅಶ್ವತ್ಥ್, ಪುಕ್ಕಟೆಯಾಗಿ ಟೀ ಮತ್ತು ಸಿಗರೇಟ್ ಕೊಡುವಂತೆ ಕೇಳಿದ್ದ. ಆಗ ಬೇಕರಿ ಮಾಲೀಕ ರಮ್ಜಿದ್ ಸೈಫುಲ್ಲಾ ಅವರು ಆರೋಪಿಗೆ ಟೀ ಮತ್ತು ಸಿಗರೇಟ್ ಕೊಟ್ಟಿರಲಿಲ್ಲ. ಇದರಿಂದ ಕೆರಳಿದ ಆರೋಪಿಯು ಬೇಕರಿಯೊಳಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಹೊರಕ್ಕೆ ಎಸೆದು ಗಲಾಟೆ ಮಾಡಿದ್ದ ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.