ADVERTISEMENT

ಬೆಂಗಳೂರು | ಕೊಲೆಗೆ ಜೈಲಿನಿಂದಲೇ ಸಂಚು ರೂಪಿಸಿದ ರೌಡಿ ಶೀಟರ್‌ಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 1:46 IST
Last Updated 30 ಆಗಸ್ಟ್ 2024, 1:46 IST
<div class="paragraphs"><p>ಜೈಲು </p></div>

ಜೈಲು

   

(ಪ್ರಾಧಿನಿಧಿಕ ಚಿತ್ರ)

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ರೌಡಿ ಶೀಟರ್‌ಗಳು ಎಂಟು ತಿಂಗಳ ಅವಧಿಯಲ್ಲಿ ಜೈಲಿನಲ್ಲೇ ಕುಳಿತು ಎರಡು ಕೊಲೆಗಳಿಗೆ ಸಂಚು ರೂಪಿಸಿದ್ದು ಮತ್ತು ಹಣ ನೀಡುವಂತೆ ಬೆದರಿಕೆ ಕರೆ ಮಾಡಿರುವ ಬಗ್ಗೆ 'ಪ್ರಜಾವಾಣಿ'ಗೆ ದಾಖಲೆ ಲಭ್ಯವಾಗಿದೆ.

ADVERTISEMENT

ಆರೋಪಿಗಳು ಈ ಕೃತ್ಯವೆಸಗಲು ಮೊಬೈಲ್ ಫೋನ್‌ ಬಳಸಿದ್ದಾರೆ. ಕೊಲೆ ಪ್ರಕರಣದಲ್ಲಿ ರೌಡಿಗಳು ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿರುವುದು ಮತ್ತು ಇಂಟರ್‌ನೆಟ್‌ ಕರೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಎರಡು ಪ್ರಕರಣಗಳಲ್ಲಿ ರೌಡಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರಾಗೃಹ ಪರಿಶೀಲನೆಗಾಗಿ ಶನಿವಾರ (ಆಗಸ್ಟ್‌ 24) ಹೋಗಿದ್ದ ಸಿಸಿಬಿ ಅಧಿಕಾರಿಗಳು, ಸಿಬ್ಬಂದಿಯನ್ನು ಅರ್ಧ ಗಂಟೆ ಹೊರಗಡೆ ಕಾಯಿಸಲಾಗಿತ್ತು. ಆ ಸಂದರ್ಭದಲ್ಲೇ ಜೈಲು ಸಿಬ್ಬಂದಿ ವಸ್ತುಗಳನ್ನು ಸಾಗಿಸಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಜೈಲು ಅಧಿಕಾರಿಗಳು ಇಬ್ಬರು ಕೈದಿಗಳಿಂದ  ₹10,000 ನಗದು ಮತ್ತು ಉಕ್ಕಿನ ಮೂರು ಚಾಕುಗಳನ್ನು ವಶಪಡಿಸಿಕೊಂಡಿದ್ದರು. ಮಾದಕವಸ್ತು ಮತ್ತು ಮೊಬೈಲ್ ಫೋನ್‌ ಕಳ್ಳಸಾಗಣೆ ಮಾಡುವ ಪ್ರಯತ್ನಗಳನ್ನು ಜೈಲು ಅಧಿಕಾರಿಗಳು ಈ ವರ್ಷ ಎರಡು ಬಾರಿ ವಿಫಲಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.