ADVERTISEMENT

ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಬಸ್ ಓಡಾಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 22:20 IST
Last Updated 2 ಜೂನ್ 2020, 22:20 IST
ಜಪ್ತಿ ಮಾಡಲಾದ ಬಸ್‌ಗಳು
ಜಪ್ತಿ ಮಾಡಲಾದ ಬಸ್‌ಗಳು   

ಬೆಂಗಳೂರು: ಒಂದೇ ನೋಂದಣಿ ಸಂಖ್ಯೆಯ ಫಲಕವನ್ನು ಅಳವಡಿಸಿಕೊಂಡು ಓಡಿಸಲಾಗುತ್ತಿದ್ದ ಎರಡು ಬಸ್‌ಗಳನ್ನು ಆರ್‌ಟಿಒ ಅಧಿಕಾರಿಗಳು ಸೋಮವಾರ ರಾತ್ರಿ ಜಪ್ತಿ ಮಾಡಿದ್ದಾರೆ.

‘ಭಾರತಿ ಸ್ಕಂದ್ ಟ್ರಾವೆಲ್ಸ್‌ ಕಂಪನಿಯವರು ಸರ್ಕಾರವನ್ನು ವಂಚಿಸಿ ಎರಡು ಬಸ್‌ ಓಡಿಸುತ್ತಿದ್ದರು. ಆ ಬಗ್ಗೆ ಮಾಹಿತಿ ಕಲೆ ಹಾಕಿ ದಾಳಿ ಮಾಡಿದಾಗ ಎರಡೂ ಬಸ್‌ಗಳು ಒಂದೇ ಕಡೆ ಪತ್ತೆಯಾದವು’ ಎಂದು ಆರ್‌ಟಿಒ ಅಧಿಕಾರಿಗಳು ಹೇಳಿದರು.

‘ಬಸ್‌ಗಳನ್ನು ಜಪ್ತಿ ಮಾಡಿ ಮಾಲೀಕ ಸೋಮಶೇಖರ್ ಎಂಬುವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದರು.

ADVERTISEMENT

₹19 ಲಕ್ಷ ತೆರಿಗೆ ವಂಚನೆ: ‘ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒ ಕಚೇರಿಯಲ್ಲಿ ಬಸ್ ನೋಂದಣಿ (ಕೆಎ 51 ಸಿ 7117) ಮಾಡಿಸಲಾಗಿತ್ತು. ಅದೇ ಸಂಖ್ಯೆಯನ್ನೇ ಮತ್ತೊಂದು ಬಸ್ಸಿಗೆ ಅಳವಡಿಸಿಕೊಂಡು ಎರಡೂ ಬಸ್‌ಗಳನ್ನು ಹಲವೆಡೆ ಓಡಿಸಲಾಗುತ್ತಿತ್ತು’ ಎಂದೂ ಅಧಿಕಾರಿ ಹೇಳಿದರು.

’19 ಸೀಟು ಹೊಂದಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ, ಬಸ್ಸಿನಲ್ಲಿ 25 ಸೀಟುಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು ₹19 ಲಕ್ಷ ತೆರಿಗೆ ವಂಚನೆಯಾಗಿದೆ. ಇದರ ಜೊತೆಗೆ ನಕಲಿ ನೋಂದಣಿ ಸಂಖ್ಯೆ ಫಲಕ ಹೊಂದಿರುವ ಅನುಮಾನದಡಿ ಇನ್ನೊಂದು ಬಸ್‌ನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.