ADVERTISEMENT

ರು.ಬಸಪ್ಪಗೆ ‘ಕನ್ನಡ ಪರ ಹೋರಾಟ ರತ್ನ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 21:13 IST
Last Updated 16 ಅಕ್ಟೋಬರ್ 2025, 21:13 IST
ರು. ಬಸಪ್ಪ
ರು. ಬಸಪ್ಪ   

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ ‘ಕನ್ನಡ ಪರ ಹೋರಾಟ ರತ್ನ ಪ್ರಶಸ್ತಿ’ಗೆ ಹೋರಾಟಗಾರರೂ ಆದ ಪತ್ರಕರ್ತ ರು.ಬಸಪ್ಪ ಆಯ್ಕೆಯಾಗಿದ್ದಾರೆ. 

ಪ್ರಶಸ್ತಿಯು ₹ 5 ಸಾವಿರ ನಗದು ಒಳಗೊಂಡಿದೆ. ವಿ. ರಾಣಿ ಗೋವಿಂದರಾಜು ಅವರು ಈ ಪ್ರಶಸ್ತಿಗೆ ಸಂಬಂಧಿಸಿದಂತೆ ದತ್ತಿ ಸ್ಥಾಪಿಸಿದ್ದಾರೆ. ನ.4ರಂದು ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT