ADVERTISEMENT

ಜೆಲ್ಲಿ ರೂಪದಲ್ಲೂ ಡ್ರಗ್ಸ್ ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 10:20 IST
Last Updated 18 ಸೆಪ್ಟೆಂಬರ್ 2020, 10:20 IST
ಜೆಲ್ಲಿ ರೂಪದ ಡ್ರಗ್ಸ್
ಜೆಲ್ಲಿ ರೂಪದ ಡ್ರಗ್ಸ್   
""

ಬೆಂಗಳೂರು:ಜೆಲ್ಲಿ ರೂಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ ₹4 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಕೊತ್ತನೂರಿನ ಜಾನ್ ನಿಖೋಲಸ್ (21) ಹಾಗೂ ಜೆ.ಪಿ.ನಗರದ ಇರ್ಫಾನ್ ಶೇಖ್ (29) ಬಂಧಿತರು.

‘ಎಂ.ಜಿ.ರಸ್ತೆಯ ಆರ್.ಎಸ್.ಐ ಕಾಂಪೌಂಡ್ ಬಳಿ ಕಾರಿನಲ್ಲಿಕುಳಿತಿದ್ದ ಆರೋಪಿಗಳು, ಪರಿಚಯಸ್ಥರಿಗೆ ಡ್ರಗ್ಸ್ ಮಾರಲು ಬಂದಿದ್ದರು. ಅದೇ ವೇಳೆಯೇ ಸಿಸಿಬಿ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ’ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

‘ಆರೋಪಿಗಳ ಬಳಿ ಜೆಲ್ಲಿ ರೂಪದಲ್ಲಿದ್ದ ಟಿಎಚ್‌ಸಿ ಡ್ರಗ್ಸ್ (50 ಜೆಲ್ಲಿಗಳು), 27 ಎಲ್‌ಎಸ್‌ಡಿ ಸ್ಟ್ರಿಪ್ಸ್, ಮೊಬೈಲ್, ಕಾರು ಜಪ್ತಿ ಮಾಡಲಾಗಿದೆ’ಎಂದೂ ಹೇಳಿದರು.

ADVERTISEMENT

‘ಪೆಡ್ಲರ್ ಅಶ್ವಿನ್ ಎಂಬಾತನಿಂದ ಡ್ರಗ್ಸ್ ಖರೀದಿಸುತ್ತಿದ್ದ ಆರೋಪಿಗಳು, ಅದನ್ನೆ ಮಾರಾಟ ಮಾಡಿ ಅಕ್ರಮ ಸಂಪಾದನೆ ಮಾಡುತ್ತಿದ್ದರು. ಅಶ್ವಿನ್‌ಗಾಗಿ ಹುಡುಕಾಟ ನಡೆದಿದೆ’ಎಂದೂ ಅವರೂ ತಿಳಿಸಿದರು.

ಬಂಧಿತ ಆರೋಪಿಗಳಾದಜಾನ್ ನಿಖೋಲಸ್ ಹಾಗೂ ಇರ್ಫಾನ್ ಶೇಖ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.