ರಾಜರಾಜೇಶ್ವರಿನಗರ: ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯದಲ್ಲಿ ನಾಲ್ಕು ದಿನಗಳು ಕೊಟ್ಟಿಗೆಪಾಳ್ಯ ದಸರಾ ಮಹೋತ್ಸವ, ಊರಹಬ್ಬ, ಸಲ್ಲಾಪುರದಮ್ಮ ದೇವಿಯ ಉತ್ಸವ ಹಾಗೂ ಜಾತ್ರಾಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಕೊಟ್ಟಿಗೆಪಾಳ್ಯದಾದ್ಯಂತ ವಿದ್ಯುತ್ ದೀಪಾಲಂಕಾರ, ಬಣ್ಣದ-ಬಣ್ಣದ ತೋರಣಗಳಿಂದ ಸಿಂಗರಿಸಲಾಗಿತ್ತು. ಸಲ್ಲಾಪುರದಮ್ಮ ದೇವಸ್ಥಾನದ ಸುತ್ತ ತಳಿರು ತೋರಣ, ಬಾಳೆಕಂದುಗಳಿಂದ ಸಿಂಗರಿಸಲಾಗಿತ್ತು. 13 ವರ್ಷಗಳ ನಂತರ ಕೊಟ್ಟಿಗೆಪಾಳ್ಯ ದಸರಾಕ್ಕೆ ಜನಸಾಗರವೇ ಹರಿದುಬಂದಿತ್ತು.
ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ, ಸಲ್ಲಾಪುರದಮ್ಮ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಎನ್.ಶೇಖರ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ರಾಜರಾಜೇಶ್ವರಿನಗರ ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಗ್ರಾಮದ ಎಲ್ಲಾ ಮುಖಂಡರು ಉತ್ಸವಕ್ಕೆ ಸಾಥ್ ನೀಡಿದರು.
ವಿವಿಧ ಜಾನಪದ ಕಲಾತಂಡಗಳು ಉತ್ಸವಕ್ಕೆ ಮೆರಗು ನೀಡಿದವು. ಪ್ರತಿ ಮನೆಯಿಂದ ಮಹಿಳೆಯರು ತಂಬಿಟ್ಟು, ಬೆಲ್ಲದ ಆರತಿ ತಂದು ದೇವರಿಗೆ ಅರ್ಪಿಸಿದರು. ಪ್ರಧಾನ ಅರ್ಚಕ ಭಾಸ್ಕರ್ ಅವರ ನೇತೃತ್ವದಲ್ಲಿ ಅಗ್ನಿಕೊಂಡ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.