ADVERTISEMENT

ಸಾಮಗಾನ ಸಭಾದಿಂದ ವಿಡಿಯೊ ಗೀತೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 19:00 IST
Last Updated 10 ಆಗಸ್ಟ್ 2021, 19:00 IST

ಬೆಂಗಳೂರು: ಭಾರತೀಯ ಸಾಮಗಾನ ಸಭಾ75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ‘ವಂದೇ ಭಾರತ ಮಾತರಂ’ ಶೀರ್ಷಿಕೆಯ ಸಂಗೀತ ಪ್ರಧಾನವಾದ ವಿಡಿಯೊ ಹೊರತಂದಿದೆ.

ಭಾರತೀಯ ಸಾಮಗಾನ ಸಭಾದ ಅಧ್ಯಕ್ಷ ಆರ್‌.ಆರ್.ರವಿಶಂಕರ್,‌‘ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ರಾಗ ಸಂಯೋಜನೆ ಮಾಡಲಾಗಿದೆ. ಪಿಟೀಲು ವಾದಕಿ ಎ.ಕನ್ಯಾಕುಮಾರಿ ಅವರು ಸಂಗೀತ ಸಂಯೋಜಿಸಿದ್ದಾರೆ. ‘ವಿಷ್ಟು ಪುರಾಣ’ದಲ್ಲಿ ಭಾರತ ಮಾತೆಯನ್ನು ವರ್ಣಿಸುವ ಅರ್ಥಪೂರ್ಣ ಶ್ಲೋಕವಿದ್ದು, ಅದನ್ನು ವರ್ಣಿಸುವ ದೃಶ್ಯ ಸಂಯೋಜನೆಯೂ ಇದರಲ್ಲಿದೆ’ ಎಂದು ವಿವರಿಸಿದರು.

‘ವಂದೇ ಭಾರತ ಮಾತರಂ’ ಹಾಡು ದೇಶದ ಜನರಲ್ಲಿ ರಾಷ್ಟ್ರೀಯತೆ ಭಾವ ಮೂಡಿಸುತ್ತದೆ ಹಾಗೂ ನಮ್ಮ ಶ್ರೀಮಂತ ಪರಂಪರೆಯನ್ನು ನೆನಪಿಸುವಂತಿದೆ. ಒಂದು ನಿಮಿಷದ ಈ ವಿಡಿಯೊ ಆಗಸ್ಟ್‌ 15ರಂದು ಸಾಮಗಾನ ಸಭಾದ ಯೂಟ್ಯೂಬ್‌ ವಾಹಿನಿಯಲ್ಲಿ ಬಿಡುಗಡೆಯಾಗಲಿದೆ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.