ADVERTISEMENT

ನಿರೀಕ್ಷಣಾ ಜಾಮೀನು ಕೋರಿದ ಸಂಪತ್‌ರಾಜ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 22:06 IST
Last Updated 24 ಅಕ್ಟೋಬರ್ 2020, 22:06 IST
ಸಂಪತ್‌ ರಾಜ್‌
ಸಂಪತ್‌ ರಾಜ್‌   

ಬೆಂಗಳೂರು: ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯಲ್ಲಿದ್ದ ಶಾಸಕ ಅಖಂಡ ಶ್ರೀನಿವಾಮೂರ್ತಿ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದಡಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಸಂಪತ್ ರಾಜ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೊರೊನಾ ಸೋಂಕು ತಗುಲಿದ ಕಾರಣ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮುಖಂಡ, ವಕೀಲರ ಮೂಲಕ ಅರ್ಜಿ ಹಾಕಿದ್ದಾರೆ. ಅದಕ್ಕೆ ಸಿಸಿಬಿ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದರೆ. ಪ್ರಕರಣದ ವಿಚಾರಣೆ ಅ. 27ರಂದು ನಡೆಯಲಿದೆ.

‘ಬೆಂಗಳೂರಿನ ಮೇಯರ್ ಆಗಿ ಕೆಲಸ ಮಾಡಿದವನು ನಾನು. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಎಫ್ಐಆರ್‌ನಲ್ಲೂ ನನ್ನ ಹೆಸರಿಲ್ಲ. ರಾಜಕೀಯ ದುರುದ್ದೇಶದಿಂದ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ, ಅರ್ಜಿ ಮನ್ನಿಸಿ ಜಾಮೀನು ನೀಡಬೇಕು’ ಎಂದು ಸಂಪತ್‌ರಾಜ್ ಕೋರಿದ್ದಾರೆ.

ADVERTISEMENT

ಸಿಸಿಬಿ ಪೊಲೀಸರು, ‘ಪ್ರಕರಣದಲ್ಲಿ ಅವರ ಪಾತ್ರ ಇರುವ ಕುರಿತ ಪುರಾವೆಗಳು ಇವೆ. ಸಂಪತ್ ರಾಜ್ ಸಹಾಯಕರಾದ ಅರುಣ್ ಹಾಗೂ ಸಂತೋಷ್, ಘಟನೆ ದಿನದಂದು ಸ್ಥಳದಲ್ಲೇ ಇದ್ದುಕೊಂಡು ಮನೆಗೆ ಬೆಂಕಿ ಹಚ್ಚಿಸಿದ್ದಾರೆ. ಹೀಗಾಗಿ, ಸಂಪತ್‌ ರಾಜ್ ಅವರಿಗೆ ಜಾಮೀನು ನೀಡಬಾರದು’ ಎಂದು ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.