ADVERTISEMENT

ಲಕ್ಷ್ಮೀಪತಿಗೆ ‘ಸಂಸ್ಕೃತಿ ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 18:28 IST
Last Updated 8 ಫೆಬ್ರುವರಿ 2020, 18:28 IST
ಲಕ್ಷ್ಮೀಪತಿ ಕೋಲಾರ
ಲಕ್ಷ್ಮೀಪತಿ ಕೋಲಾರ   

ಬೆಂಗಳೂರು: ಸಿದ್ಧಾರ್ಥ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಅವರು ತಮ್ಮ ತಂದೆ ಎಚ್‌.ಎಂ.ಗಂಗಾಧರಯ್ಯ ಹೆಸರಿನಲ್ಲಿ ನೀಡುವ ‘ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿ’ಗೆ ಕವಿಲಕ್ಷ್ಮೀಪತಿ ಕೋಲಾರ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರ ಆಯ್ಕೆಗೆಚಲನಚಿತ್ರ ನಿರ್ದೇಶಕ ಎನ್‌.ಎಸ್.ಶಂಕರ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಡಾ.ಲಕ್ಷ್ಮಣ ದಾಸ್, ಡಾ.ರಾಜಪ್ಪ ದಳವಾಯಿ, ಜನಾರ್ದನ (ಜನ್ನಿ), ಶಿವಾಜಿ ಗಣೇಶನ್ ಹಾಗೂ ಗುಡಿಹಳ್ಳಿ ನಾಗರಾಜ್ ಅವರು ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.

ಮಾ.1ಕ್ಕೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ನಡೆಯುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಸಮಿತಿಯ ಸಂಚಾಲಕ ಪ್ರೊ. ಮಾದೇವ್‌ ಭರಣಿತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.