ADVERTISEMENT

ಭಾರತದ ಸದೃಢತೆಗೆ ಸನಾತನ ಶಿಕ್ಷಣವೇ ಬುನಾದಿ: ಸುರೇಶ ಸೋನಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಸುರೇಶ ಸೋನಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:46 IST
Last Updated 4 ನವೆಂಬರ್ 2022, 19:46 IST
ನಗರದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಗುರುಕುಲ ಶಿಕ್ಷಾ ವಿಶ್ವ ಸುದೀಕ್ಷಾ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಗುರುಕುಲ ಸಂಗೋಷ್ಠಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸುರೇಶ್ ಸೋನಿ ಉದ್ಘಾಟಿಸಿದರು. ನೇಪಾಳ ಶಿಕ್ಷಾ ಪರಿಷತ್ ಮಹಾಮಂತ್ರಿ ವಾಸುದೇವ ಕೃಷ್ಣ ಶಾಸ್ತ್ರಿ, ಜನಸೇವಾ ಟ್ರಸ್ಟ್ ನಿರ್ವಾಹಕ ವಿಶ್ವಸ್ತ ನಾ.ತಿಪ್ಪೇಸ್ವಾಮಿ, ವೇದ ವಿಜ್ಞಾನಶೋಧ ಸಂಸ್ಥಾನದ ಅಧ್ಯಕ್ಷ ಪ್ರೊ.ರಾಮಚಂದ್ರ ಜಿ. ಭಟ್ ಕೋಟೆಮನೆ, ದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ ಪ್ರೊ. ಶ್ರೀನಿವಾಸ ವರಖೇಡಿ, ಕರ್ನಾಟಕ ಸಂಸ್ಕೃತ ವಿ.ವಿ ಪ್ರಭಾರ ಕುಲಪತಿ ಪ್ರೊ.ಬಿ.ಗಿರೀಶ ಚಂದ್ರ, ಜನಸೇವಾ ವಿದ್ಯಾ ಕೇಂದ್ರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಭಾರತೀಯ ಶಿಕ್ಷಣ ಮಂಡಲದ ಮಹಾಮಂತ್ರಿ ಉಮಾಶಂಕರ್ ಪಚೌರಿ ಇದ್ದರು -      ಪ್ರಜಾವಾಣಿ ಚಿತ್ರ

ಬೆಂಗಳೂರು: ಭಾರತದ ಸದೃಢತೆಗೆ ಸನಾತನ ಶಿಕ್ಷಣವೇ ಬುನಾದಿ. ಪ್ರಾಚೀನ ಕಾಲದಿಂದ ಹರಿದುಬಂದ ಈ ಜ್ಞಾನಪರಂಪರೆಯನ್ನು ಇಂದಿನ ಕಾಲಮಾನದ ಪೀಳಿಗೆಗೂ ತಲುಪಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಸುರೇಶ ಸೋನಿ ಪ್ರತಿಪಾದಿಸಿದರು.

ಚನ್ನೇನಹಳ್ಳಿ ಜನಸೇವಾ ವಿಶ್ವಸ್ಥ ಮಂಡಳಿಯ ಪ್ರಕಲ್ಪವಾದ ವೇದವಿಜ್ಞಾನ ಗುರುಕುಲ ಹಮ್ಮಿಕೊಂಡಿರುವ ಮೂರು ದಿನಗಳ ರಾಷ್ಟ್ರೀಯ ಗುರು ಕುಲ ಸಂಗೋಷ್ಠಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಗುರುಕುಲ ಶಿಕ್ಷಾ ವಿಶ್ವ ಸುದೀಕ್ಷಾ’ ಎಂಬ ಧ್ಯೇಯವಾಕ್ಯ ಕಾರ್ಯಕ್ರಮದ ಕೇಂದ್ರಬಿಂದು. ಗುರುಕುಲಗಳಲ್ಲಿ ಇರುವ ಭಾರತೀಯ ವಿದ್ಯೆಗಳಿಂದಲೇ ವಿಶ್ವದ ಕಲ್ಯಾಣ ನಿಶ್ಚಿತ. ಸ್ವಾಮಿ ವಿವೇಕಾನಂದರು ಹೇಳಿದಂತೆ ಮನುಷ್ಯನ ಜ್ಞಾನದ ಎಳೆಯನ್ನು ಜಾಗೃತಗೊಳಿಸಿ ಜೀವನಕ್ಕೆ ಅನ್ವಯಗೊಳಿಸುವುದೇ ನಿಜವಾದ ಶಿಕ್ಷಣ. ಅಂತಹ ಶಿಕ್ಷಣ ಗುರುಕುಲಗಳಂತಹ ಶಿಕ್ಷಣಸಂಸ್ಥೆಗಳಿಂದ ಸಾಧ್ಯ. ಹಾಗಾಗಿ, ಎಲ್ಲರ ನಡಿಗೆ ಭಾರತೀಯ ಶಿಕ್ಷಣದ ಕೇಂದ್ರಗಳಾದ ಗುರುಕುಲಗಳ ಕಡೆಗೆ ಸಾಗಲಿ’ ಎಂದು ಅವರು ಆಶಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಅಖಿಲ ಭಾರತ ಗುರುಕುಲ ಪ್ರಕಲ್ಪ ವೇದ ವಿಜ್ಞಾನಶೋಧ ಸಂಸ್ಥಾನದ ಅಧ್ಯಕ್ಷ ಪ್ರೊ.ರಾಮಚಂದ್ರ ಭಟ್ಟ, ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ವಿರೂಪಾಕ್ಷ ಜಡ್ಡಿಪಾಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.