ADVERTISEMENT

‘ಹಿರಿಮೆ ಒಪ್ಪುವ ಮನಃಸ್ಥಿತಿ ಪ್ರಗತಿಪರರಿಗಿಲ್ಲ’

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:08 IST
Last Updated 5 ಜನವರಿ 2019, 20:08 IST
ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಸ್ವಾಮೀಜಿ ಸಮ್ಮೇಳನವನ್ನು ಉದ್ಘಾಟಿಸಿದರು. (ಎಡದಿಂದ) ದಿನೇಶ್ ಕಾಮತ್, ಡಿ.ಆರ್.ಕಾರ್ತಿಕೇಯನ್, ಅನಂತಕುಮಾರ್‌ ಹೆಗಡೆ, ಹಂಪ ನಾಗರಾಜಯ್ಯ, ಟಿ.ಎಂ.ಪ್ರಭಾಕರ್ ಇದ್ದಾರೆ
ಕೈಲಾಸ ಆಶ್ರಮ ಮಹಾಸಂಸ್ಥಾನದ ಜಯೇಂದ್ರಪುರಿ ಸ್ವಾಮೀಜಿ ಸಮ್ಮೇಳನವನ್ನು ಉದ್ಘಾಟಿಸಿದರು. (ಎಡದಿಂದ) ದಿನೇಶ್ ಕಾಮತ್, ಡಿ.ಆರ್.ಕಾರ್ತಿಕೇಯನ್, ಅನಂತಕುಮಾರ್‌ ಹೆಗಡೆ, ಹಂಪ ನಾಗರಾಜಯ್ಯ, ಟಿ.ಎಂ.ಪ್ರಭಾಕರ್ ಇದ್ದಾರೆ   

ಬೆಂಗಳೂರು: ‘ಭಾರತದ ಹಿರಿಮೆಯನ್ನುಜಗತ್ತು ಕೊಂಡಾಡುತ್ತಿದೆ. ಆದರೆ, ನಮ್ಮದುರಂತ ನೋಡಿ, ಅದನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಪ್ರಗತಿಪರರಿಗಿಲ್ಲ’ ಎಂದುಕೇಂದ್ರ ಸಚಿವಅನಂತಕುಮಾರ ಹೆಗಡೆ ಹೇಳಿದರು.

ಸಂಸ್ಕೃತ ಭಾರತೀ ಸಂಸ್ಥೆರಾಜರಾಜೇಶ್ವರಿ ನಗರದಲ್ಲಿ ಆಯೋಜಿಸಿರುವ ‘ಸಂಸ್ಕೃತ ಸಂಜೀವಿನಿ’ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

‘ಭಾರತ ಜಗತ್ತಿಗೆ ಕೊಟ್ಟ ಅಮೂಲ್ಯ ಕೊಡುಗೆ ಸಂಸ್ಕೃತ.ಗಡಿ ದಾಟಿ ಹೋದರೆ ಅದರವ್ಯಾಪ್ತಿ ಗೊತ್ತಾಗುತ್ತದೆ. ಆದರೆನಮ್ಮ ನಿತ್ಯಜೀವನದಲ್ಲಿ ಸಂಸ್ಕೃತಕ್ಕೆ ಕಡಿಮೆ ಅವಕಾಶ ಕೊಡುವ ಮೂಲಕ ಪರಕೀಯ ಭಾಷೆಯ ಅಡಿದಾವರೆಯಲ್ಲಿ ನೆಮ್ಮದಿಯನ್ನು ಕಾಣಲು ಹೊರಟಿದ್ದೇವೆ’ ಎಂದು ವಿಷಾದಿಸಿದರು.

ADVERTISEMENT

‘ಪರಕೀಯರು ಸಂಸ್ಕೃತದ ಹಸ್ತಪ್ರತಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಅವುಗಳಲ್ಲಿರುವ ನಿಗೂಢತೆಯನ್ನು ತಿಳಿದುಕೊಳ್ಳಲು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದಾರೆ’ ಎಂದರು.

ವಿದ್ವಾಂಸ ಹಂಪ ನಾಗರಾಜಯ್ಯ, ‘ಭಾಷೆಯನ್ನು ಹೊರತುಪಡಿಸಿ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಶಬ್ದದ ಬೆಳಕಿರದಿದ್ದರೆ ವಿಶ್ವ ಅಂಧಕಾರದಲ್ಲಿ ಮುಳುಗುತ್ತಿತ್ತು’ ಎಂದರು.

‘ಸಂಸ್ಕೃತ ಭಾಷೆ ಜ್ಞಾನದ ಜಗತ್ತಿನ ಪ್ರವೇಶಕ್ಕೆ ವೀಸಾ ಇದ್ದಂತೆ.ಕನ್ನಡದ ನಿಘಂಟಿನಲ್ಲಿ ಶೇಕಡಾ 65ರಷ್ಟು ಸಂಸ್ಕೃತ ಪದಗಳಿವೆ. ಕನ್ನಡವು ಸಂಸ್ಕೃತ-ಪ್ರಾಕೃತವೆಂಬ ಇಬ್ಬರು ತಾಯಂದಿರ ಮೊಲೆಹಾಲು ಕುಡಿದಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿಜನಾರ್ದನ ಹೆಗಡೆಯವರ ‘ಸುಬಂತ-ಶೇವಧಿ’ ಪುಸ್ತಕಬಿಡುಗಡೆ ಮಾಡಲಾಯಿತು. ಅಲ್ಲದೆ‘ಸಂಭಾಷಣ-ಸಂದೇಶ’ ಮಾಸಪತ್ರಿಕೆಯ ಅಂತರ್ಜಾಲದ ಆವೃತ್ತಿಯನ್ನು ಸಚಿವರು ಲೋಕಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.