ADVERTISEMENT

ಸಮಾಜ ಸೇವಕರಿಗೆ ಗೌರವ ವಿರಳ: ಸಂತೋಷ್ ಹೆಗ್ಡೆ

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 16:29 IST
Last Updated 1 ಮೇ 2022, 16:29 IST
ಬಂಟರ ಸಂಘದ ವತಿಯಿಂದ ಕರ್ನಾಟಕ ಮಹಿಳಾ ದಕ್ಷತ ಸಮಿತಿಯ ಅಧ್ಯಕ್ಷರಾದ ಶರಣ್ಯ ಎಸ್.ಹೆಗ್ಡೆ ಅವರಿಗೆ ‘ದಿ.ಸುಶೀಲಾ ಪಿ.ಶೆಟ್ಟಿ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂತೋಷ್ ಹೆಗ್ಡೆ, ಆರ್.ಉಪೇಂದ್ರ ಶೆಟ್ಟಿ ಹಾಗೂ ಇತರರು ಇದ್ದಾರೆ.
ಬಂಟರ ಸಂಘದ ವತಿಯಿಂದ ಕರ್ನಾಟಕ ಮಹಿಳಾ ದಕ್ಷತ ಸಮಿತಿಯ ಅಧ್ಯಕ್ಷರಾದ ಶರಣ್ಯ ಎಸ್.ಹೆಗ್ಡೆ ಅವರಿಗೆ ‘ದಿ.ಸುಶೀಲಾ ಪಿ.ಶೆಟ್ಟಿ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂತೋಷ್ ಹೆಗ್ಡೆ, ಆರ್.ಉಪೇಂದ್ರ ಶೆಟ್ಟಿ ಹಾಗೂ ಇತರರು ಇದ್ದಾರೆ.   

ಬೆಂಗಳೂರು: ‘ಅಧಿಕಾರದಲ್ಲಿರುವವರು ಮತ್ತು ಅತಿ ಶ್ರೀಮಂತರಿಗೆ ಮಾತ್ರ ಹೆಚ್ಚು ಗೌರವ ಸಿಗುತ್ತಿದೆ. ಆದರೆ, ಆರ್.ಎನ್.ಶೆಟ್ಟಿಯವರ ಸಮಾಜ ಸೇವೆ ಗುರುತಿಸಿ, ಅವರ ಪ್ರತಿಮೆ ಅನಾವರಣೆಗೊಳಿಸಿರುವುದು ಶ್ಲಾಘನೀಯ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ಹೇಳಿದರು.

ನಗರದ ಬಂಟರ ಸಂಘದಲ್ಲಿ ಭಾನುವಾರ ನಡೆದ ದಿವಂಗತ ಆರ್.ಎನ್.ಶೆಟ್ಟಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರ್.ಎನ್.ಶೆಟ್ಟಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರು ಹೆಚ್ಚು ವ್ಯಾಸಂಗ ಮಾಡದಿದ್ದರೂ ತಮ್ಮ ಅನುಭವಗಳಿಂದ ಯಶಸ್ಸನ್ನು ಸಾಧಿಸಿದ್ದರು. ದಾನ, ಧರ್ಮಗಳ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ಅವರ ಸಾಧನೆ ಮತ್ತು ಸಮಾಜ ಸೇವೆ ಗುರುತಿಸಿ ಗೌರವ ಸಲ್ಲಿಸಬೇಕು. ಅದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ADVERTISEMENT

ಮುಂಬೈನ ಹೇರಂಬ ಇಂಡಸ್ಟ್ರೀಸ್‌ನ ಮುಖ್ಯಸ್ಥ ಸದಾಶಿವ ಕೆ.ಶೆಟ್ಟಿ ಅವರಿಗೆ ‘ಆರ್.ಎನ್.ಶೆಟ್ಟಿ ಸ್ಮಾರಕ ಔದ್ಯಮಿಕ ಸಾಧಕ ಪ್ರಶಸ್ತಿ’ ಹಾಗೂ ಕರ್ನಾಟಕ ಮಹಿಳಾ ದಕ್ಷತ ಸಮಿತಿ ಅಧ್ಯಕ್ಷರಾದ ಶರಣ್ಯ ಎಸ್.ಹೆಗ್ಡೆ ಅವರಿಗೆ ‘ದಿ.ಸುಶೀಲಾ ಪಿ.ಶೆಟ್ಟಿ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಗಿರೀಶ್ ರೈ ಬರೆದಿರುವ ‘ಪ್ರಜಾಪ್ರಭುತ್ವ-ಬಂಟ ಜನಪ್ರತಿನಿಧಿಗಳು’ ಎಂಬ ಪುಸ್ತಕವನ್ನು ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿದರು. ಕರಾವಳಿಯ ಬಿಸು (ಯುಗಾದಿ) ಆಚರಣೆಯೂ ನಡೆಯಿತು.

ಹೈಕೋರ್ಟ್‌ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.