ADVERTISEMENT

30 ಅಧಿಕಾರಿ, ಸಿಬ್ಬಂದಿಗೆ ಸರ್ವೋತ್ತಮ ಪ್ರಶಸ್ತಿ

ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮುರುಳೀಧರ್‌ಗೆ ಗೌರವ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 21:15 IST
Last Updated 30 ಜೂನ್ 2022, 21:15 IST

ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್‌, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಡಿ.ಪಿ. ಮುರುಳೀಧರ್, ಆರ್ಥಿಕ ಇಲಾಖೆ ಜಂಟಿ ಕಾರ್ಯದರ್ಶಿ ವತ್ಸಲಾಕುಮಾರಿ ಸೇರಿದಂತೆ 30 ಜನ ಅಧಿಕಾರಿ ಮತ್ತು ನೌಕರರಿಗೆ ರಾಜ್ಯ ಸರ್ಕಾರ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿ ಲಭಿಸಿದೆ.

ವಿವಿಧ ಇಲಾಖೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತ್ತು ಸಾಧನೆಗೈದ ಸಿಬ್ಬಂದಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು₹50 ಸಾವಿರ ಹಾಗೂ ಫಲಕ ಒಳಗೊಂಡಿದೆ.

ಪ್ರಶಸ್ತಿಗೆ ಆಯ್ಕೆಯಾದವರು: ತುಕಾರಾಮ್‌ ಕಲ್ಯಾಣಕರ್‌, ಸಚಿವಾಲಯ, ಬೆಂಗಳೂರು. ಶೋಭಾ ಪಾಟೀಲ, ಕೃಷಿ ಇಲಾಖೆ, ಬೆಂಗಳೂರು. ಅಮರೇಶ್‌ ತುಂಬಗಿ, ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು. ಡಾ. ಕಿರಣ್‌, ಆರೋಗ್ಯ ಇಲಾಖೆ, ಪಾವಗಡ. ಗಡ್ಡೆ ಶಿವರಾಜಕುಮಾರ್‌, ಲೆಕ್ಕ ಪತ್ರ ಇಲಾಖೆ, ಬೆಂಗಳೂರ. ಆಶಾದೇವಿ ಕೇಶವ ನಾಯಕ್‌, ಹಿಂದುಳಿದ ವರ್ಗಗಳ ಇಲಾಖೆ, ಬ್ರಹ್ಮಾವರ. ಸುರೇಶ್‌ ಹವಾಲ್ದಾರ್‌, ತಹಶೀಲ್ದಾರ್ ಕಚೇರಿ, ಬಾದಾಮಿ. ಡಾ. ಪುಷ್ಪಲತಾ, ಶಿಕ್ಷಣ ಇಲಾಖೆ, ದಾವಣಗೆರೆ. ಎಚ್‌.ಎ. ಶೋಭಾ, ಆರ್ಥಿಕ ಇಲಾಖೆ, ಬೆಂಗಳೂರು. ಡಾ. ಪ್ರಾಣೇಶ್‌ ಜಹಾಗೀರದಾರ್, ಪಶುಸಂಗೋಪನಾ ಇಲಾಖೆ, ವಿಜಯಪುರ. ಎಸ್‌.ಬಿ. ಕೊಂಗವಾಡ,ಕೃಷಿ ಇಲಾಖೆ, ಬಾಗಲಕೋಟೆ. ಎಂ.ಇ. ಚನ್ನಬಸವರಾಜ, ಕಂದಾಯ ಇಲಾಖೆ, ಬೆಂಗಳೂರು. ಬಿ. ಊರ್ಮಿಳಾ,ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು. ಎ. ಶ್ರೀನಿವಾಸ್‌ರಾವ್‌, ಜಿಲ್ಲಾಪಂಚಾಯಿತಿ, ಉಡುಪಿ. ಜೆ. ಜಯರಾಜ್‌, ಸಚಿವಾಲಯ,ಬೆಂಗಳೂರು. ವೆಂಕಟೇಶ್‌ ಅಪ್ಪಯ್ಯ ಶಿಂಧೀಹಟ್ಟಿ, ಕಾರ್ಮಿಕ ಇಲಾಖೆ, ಬೆಳಗಾವಿ. ಬಸವರಾಜ, ತಹಶೀಲ್ದಾರ್ ಕಚೇರಿ, ಲಿಂಗಸಗೂರು. ಎಂ.ಪಿ. ರವಿಪ್ರಸಾದ್‌, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು. ಡಾ. ಎಂ. ಜಗದೀಶ್‌, ತೋಟಗಾರಿಕೆ ಇಲಾಖೆ, ಬೆಂಗಳೂರು. ಕೆ. ಗಾಯತ್ರಿ ದೇವಿ, ಆರೋಗ್ಯ ಇಲಾಖೆ, ದಾವಣಗೆರೆ. ಎಚ್‌.ಎಸ್‌. ಪ್ರಸಾದ್‌, ಐಟಿಐ, ಗುಂಡ್ಲುಪೇಟೆ. ಕೃಷ್ಣ ಕಾಮಕರ, ತಹಶೀಲ್ದಾರ್, ಯಲ್ಲಾಪುರ. ಡಾ. ನಾಗೇಂದ್ರ ಎಫ್‌. ಹೊನ್ನಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ, ಶಿವಮೊಗ್ಗ. ನೀಲಿಮಾ ಅಶೋಕ್‌ ಕೊಟ್ಟಣ, ಆರೋಗ್ಯ ಇಲಾಖೆ, ಹಾವೇರಿ. ಶೋಭಾರಾಣಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಮೈಸೂರು. ಎ.ಎ. ಅಬ್ದುಲ್ಲಾ, ಗ್ರಾಮೀಣಾಭಿವೃದ್ಧಿ ಇಲಾಖೆ, ಕೊಡಗು. ಮಲ್ಲವ್ವ ನಿಂಗಪ್ಪ ರಾಯಕೊಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಾನ್ವಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.