ADVERTISEMENT

ಬ್ಯಾಗ್‌ ತೂಕ: ದಿಢೀರ್‌ ಶಾಲೆಗೇ ತೆರಳಿ ತಪಾಸಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:24 IST
Last Updated 5 ಜೂನ್ 2019, 19:24 IST
   

ಬೆಂಗಳೂರು: ಶಾಲಾ ಬ್ಯಾಗ್‌ಗಳ ಭಾರವನ್ನು ತಗ್ಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಚೆಗೆ ಆದೇಶ ನೀಡಿದ್ದು, ಆದೇಶ ಸಮರ್ಪಕವಾಗಿ ಜಾರಿಗೆ ಬರುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಹಠಾತ್‌ ತಪಾಸಣೆ ನಡೆಸಲು ಮುಂದಾಗಿದೆ.

ಕಳೆದ ವಾರವಷ್ಟೇ ಶಾಲೆಗಳು ಆರಂಭವಾಗಿದ್ದು, ಎಲೆಕ್ಟ್ರಾನಿಕ್ ತಕ್ಕಡಿಯಲ್ಲಿ ಬ್ಯಾಗ್‌ ಇಟ್ಟು ಅದನ್ನು ತೂಗುವ ಕಾರ್ಯಾಚರಣೆ ಶೀಘ್ರ ಆರಂಭವಾಗಲಿದೆ.

‘ಸರ್ಕಾರದ ಆದೇಶವನ್ನು ಎಲ್ಲ ಶಾಲೆಗಳೂ ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ಅಧಿಕಾರಿಗಳುಶಾಲೆಗಳಿಗೆ ಹೋಗಿ ಬ್ಯಾಗ್‌ ತೂಗುತ್ತೇವೆ, ಆದೇಶ ಪಾಲನೆಯಾಗಿದೆಯೇ ಎಂಬುದನ್ನು ಗಮನಿಸುತ್ತೇವೆ. ರಾಜ್ಯದಾದ್ಯಂತ ಈ ಕಾರ್ಯಾಚರಣೆ ನಡೆಯಲಿದೆ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪರಿಣಿತರ ಸಮಿತಿಯ ವರದಿ ಮತ್ತು ಮಕ್ಕಳ ಆರೋಗ್ಯವನ್ನು ಗಮನಿಸಿ ಆಯಾ ವಯೋಮಿತಿಯ ಮಕ್ಕಳ ಬ್ಯಾಗ್‌ ಇಂತಿಷ್ಟೇ ಭಾರ ಇರಬೇಕು ಎಂದು ನಿಗದಿಪಡಿಸಿದ್ದೇವೆ. ಶಾಲೆಗಳು ನಿಯಮ ಉಲ್ಲಂಘಿಸಿದ್ದು ಸಾಬೀತಾದರೆ ಅಂತಹ ಶಾಲೆಗಳ ಮಾನ್ಯತೆ ಅಪಾಯಕ್ಕೆ ಸಿಲುಕಬಹುದು’ ಎಂದರು.

ಶಾಲಾ ಬ್ಯಾಗ್ ತೂಕ ಮಕ್ಕಳ ದೇಹ ತೂಕದ ಶೇ 10ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮದಂತೆ ಆಯಾ ವಯೋಮಿತಿಯ ಮಕ್ಕಳ ಬ್ಯಾಗ್‌ ತೂಕವನ್ನು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.