ಕೆ.ಆರ್.ಪುರ: ಸಾಹಿತಿ ಚಿದಾನಂದಮೂರ್ತಿ ಹಾಗೂ ಪಿ.ವಿ.ನಾರಾಯಣ ಸ್ಮರಣಾರ್ಥವಾಗಿ ಕನ್ನಡ ಗೆಳೆಯರ ಬಳಗದಿಂದ ರಾಮಮೂರ್ತಿನಗರದ ಅಂಬೇಡ್ಕರ್ ನಗರ ಶಾಲೆಯ 129 ಮಕ್ಕಳಿಗೆ ನೋಟ್ ಪುಸ್ತಕ, ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ‘ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಗೆಳೆಯರ ಬಳಗ ಕನ್ನಡ ಮಾಧ್ಯಮದ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪಠ್ಯೇತರ ಪರಿಕರ, ಸಹಾಯಧನ ನೀಡುವ ಮೂಲಕ ಕನ್ನಡ ಶಾಲೆಗಳ ಉಳಿವಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ’ ಎಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹಿಟಾಚಿ ಮಂಜುನಾಥ್ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿನ ಬಡಮಕ್ಕಳ ಓದಿಗೆ ಪೂರಕವಾಗಿ ಸಂಘಸಂಸ್ಥೆಗಳು ನೀಡುವ ಸಹಾಯ ಮಹತ್ವದಾಗಿದೆ. ಗೆಳೆಯರ ಬಳಗ 8ರಿಂದ 10ನೇ ತರಗತಿಯ ನೂರಕ್ಕೂ ಹೆಚ್ಚು ಮಕ್ಕಳಿಗೆ ಪಠ್ಯೇತರ ಸಾಮಗ್ರಿ ನೀಡಿದೆ’ ಎಂದರು.
ಆರ್.ಶೇಷಶಾಸ್ತ್ರಿ, ಸಂಜೀವರತ್ನ ಶೇಷಶಾಸ್ತ್ರಿ, ಮುಖ್ಯ ಶಿಕ್ಷಕಿ ಬಿ.ವಿ.ಭಾರತಿ, ಬಾ.ಹ.ಉಪೇಂದ್ರ, ಎಚ್.ಎನ್.ರಮೇಶ್ ಬಾಬು, ಡಾ.ಸ್ಮಿತಾ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.