ADVERTISEMENT

‘ವಿಜ್ಞಾನದ ಒಲವು ಹೆಚ್ಚಿಸಿಕೊಳ್ಳಿ’-ವಿಜ್ಞಾನಿ ಎಂ.ಆರ್.ಎನ್.ಮೂರ್ತಿ

ವಿಜ್ಞಾನಿ ಎಂ.ಆರ್.ಎನ್.ಮೂರ್ತಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:47 IST
Last Updated 28 ಮಾರ್ಚ್ 2021, 4:47 IST
ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಜೊತೆ (ಎಡದಿಂದ ಮೊದಲನೆಯವರು) ಹಿರಿಯ ವಿಜ್ಞಾನಿ ಎಂ.ಆರ್.ಎನ್ ಮೂರ್ತಿ ಮಾತುಕತೆ ನಡೆಸಿದರು. ಗಿರೀಶ್ ಕಡ್ಲೇವಾಡ ಹಾಗೂ ಇತರರು ಇದ್ದರು -ಪ್ರಜಾವಾಣಿ ಚಿತ್ರ
ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಜೊತೆ (ಎಡದಿಂದ ಮೊದಲನೆಯವರು) ಹಿರಿಯ ವಿಜ್ಞಾನಿ ಎಂ.ಆರ್.ಎನ್ ಮೂರ್ತಿ ಮಾತುಕತೆ ನಡೆಸಿದರು. ಗಿರೀಶ್ ಕಡ್ಲೇವಾಡ ಹಾಗೂ ಇತರರು ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ವಿಜ್ಞಾನ ವಿಷಯದ ಮೇಲೆ ಹೆಚ್ಚಿನ ಆಸಕ್ತಿ ಮೂಡಬೇಕು. ಇದರಿಂದಭವಿಷ್ಯದಲ್ಲಿ ಅವರಿಗೆ ವಿಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ಸಿಗಲಿವೆ’ ಎಂದುಹಿರಿಯ ವಿಜ್ಞಾನಿ ಎಂ.ಆರ್.ಎನ್.ಮೂರ್ತಿ ತಿಳಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ವಿಜ್ಞಾನ ಪರಿಷತ್ತು ನಗರದಲ್ಲಿ ಶನಿವಾರ ಆಯೋಜಿಸಿದ್ದ ಸರ್‌.ಸಿ.ವಿ.ರಾಮನ್ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ವಿಜ್ಞಾನದ ಆಸಕ್ತಿ ಮೂಡಲು ಶಿಕ್ಷಕರೂ ನೆರವಾಗಬೇಕು. ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪರಿಪೂರ್ಣವಾಗಿ ಅರ್ಥೈಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೊರೊನಾ ಪರಿಸ್ಥಿತಿಯಿಂದ ಬಹಳಷ್ಟು ಸಮಸ್ಯೆಗಳು ಉದ್ಭವಿಸಿವೆ. ಇದಕ್ಕಾಗಿ ವಿಜ್ಞಾನಿಗಳು ಹಗಲಿರುಳೆನ್ನದೆ ಶ್ರಮಿಸಿದ ಪರಿಣಾಮ ಲಸಿಕೆ ಕಂಡು ಹಿಡಿಯಲು ಸಾಧ್ಯವಾಯಿತು. ಇದಾದ ಬಳಿಕ ಇಡೀ ಜಗತ್ತು ಭಾರತವನ್ನು ನೋಡುತ್ತಿದೆ’ ಎಂದರು.

’ಲಸಿಕೆ ಇದ್ದರೂ ಸಾರ್ವಜನಿಕರು ಕೊರೊನಾ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವಚ್ಛತೆಗೆ ಎಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು. ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಪೋಷಕರಿಗೆ ಮಕ್ಕಳೂ ತಿಳಿಸಿ’ ಎಂದು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ,‘ ಜನರು ವೈಜ್ಞಾನಿಕವಾಗಿ ಆಲೋಚಿಸುವ ಗುಣ ಬೆಳೆಸಿಕೊಳ್ಳಬೇಕು. ಯುವಜನತೆ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಸೇವೆ ಸಲ್ಲಿಸಬೇಕು. ಕೋವಿಡ್‌ನಿಂದ ನಿರ್ಮಾಣವಾಗಿರುವ ಸಂದಿಗ್ಧ ಸ್ಥಿತಿಯ ನಡುವೆಯೂ ಜೀವನ ಮುಂದುವರೆಸುವುದು ಅನಿವಾರ್ಯ. ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಕೆಲಸ ಪಡೆಯಲು ಹೆಚ್ಚಿನ ಶ್ರಮ ಪಡಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.