ADVERTISEMENT

ಬೆಂಗಳೂರಿನಿಂದಲೇ ಚಾಲಕರಹಿತ ಕಾರು

ವಿಪ್ರೊ–ಐಐಎಸ್‌ಸಿ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 20:00 IST
Last Updated 12 ಸೆಪ್ಟೆಂಬರ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ವಿಪ್ರೊ ಕಂಪನಿಗಳು ಜತೆಯಾಗಿ ಚಾಲಕರಹಿತ ಕಾರು ಮತ್ತು ಲೋಹದ 3ಡಿ ಪ್ರಿಂಟಿಂಗ್‌ ಯಂತ್ರ ಅಭಿವೃದ್ಧಿಪಡಿಸುತ್ತಿರುವ ಮಾಹಿತಿಯನ್ನು ವಿಪ್ರೊ ಕಂಪನಿಯ ಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ
ಬಹಿರಂಗಪಡಿಸಿದ್ದಾರೆ.

ಗುರುವಾರ ನಡೆದ ಐಐಎಸ್‌ಸಿ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಭಾರತದ ಮಟ್ಟಿಗೆ ಮೊದಲ ಪ್ರಯತ್ನವಾಗಿರುವ ಈ ಯೋಜನೆಗಳು ಅಂತಿಮ ಹಂತದಲ್ಲಿವೆ. ಲೋಹದ 3ಡಿ ಮುದ್ರಣ ಯಂತ್ರವು ಸಂಯೋಜಿತ ಉತ್ಪಾದನೆ ಆಗಿರುತ್ತದೆ ಎಂದರು.

ಚಾಲಕರಹಿತ ಕಾರಿನ ಅಭಿವೃದ್ಧಿ ಇದೀಗ ಯಾವ ಹಂತಕ್ಕೆ ಬಂದಿದೆ ಎಂಬ ಬಗ್ಗೆ ಸುದ್ದಿಗಾರರು ಸ್ವತಃ ಅಜೀಂ ಪ್ರೇಮ್‌ಜಿ ಅವರಲ್ಲಿ ಸಮಾರಂಭದ ಕೊನೆಯಲ್ಲಿ ಕೇಳಿದರು. ಆದರೆ ಅವರು ‘ನೋ ಕಮೆಂಟ್ಸ್‌’ ಎಂದು ಉತ್ತರಿಸಿದರು. ಕಾರು ಅಭಿವೃದ್ಧಿಪಡಿಸುತ್ತಿರುವ ವಿಭಾಗದ ಮುಖ್ಯಸ್ಥರು ಸಹ ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗ ಅಸಾಧ್ಯ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.