ADVERTISEMENT

ಟಾಟಾ ಕಂಪನಿ ಹೆಸರಿನಲ್ಲಿ ನಕಲಿ ವಸ್ತು ಮಾರಾಟ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 19:19 IST
Last Updated 28 ಜನವರಿ 2023, 19:19 IST
ಬಾಕ್ಸ್‌ಗಳಲ್ಲಿ ತುಂಬಿದ್ದ ನಕಲಿ ವಸ್ತುಗಳು
ಬಾಕ್ಸ್‌ಗಳಲ್ಲಿ ತುಂಬಿದ್ದ ನಕಲಿ ವಸ್ತುಗಳು   

ಬೆಂಗಳೂರು: ಟಾಟಾ ಕಂಪನಿಯ ಸ್ಟೀಲ್‌ ಥ್ರೆಡ್‌ ಸಾಕೇಟ್‌ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಯ ಮೇಲೆ ಸಿ.ಸಿ.ಬಿಯ ಆರ್ಥಿಕ ಅಪರಾಧ ದಳದ ಸಿಬ್ಬಂದಿ ದಾಳಿ ನಡೆಸಿ ₹ 96 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಲಾಲ್‌ಬಾಗ್‌ ರಸ್ತೆಯ ಕೆ.ಎಸ್‌.ಗಾರ್ಡನ್‌ನ 4ನೇ ಕ್ರಾಸ್‌ನ ಕೋಲ್ಕತ್ತ ಪೇಂಟಿಂಗ್ಸ್‌ಗೆ ಸೇರಿದ ಗೋದಾಮಿನ ಮೇಲೆ ಸಿಬ್ಬಂದಿ ದಾಳಿ ನಡೆಸಿದಾಗ ನಕಲಿ ವಸ್ತುಗಳು ಪತ್ತೆಯಾಗಿವೆ.

‘ನಕಲಿ ವಸ್ತುಗಳನ್ನೇ ಅಸಲಿಯೆಂದು ಮಾರಾಟ ಮಾಡಿ, ಗ್ರಾಹಕರಿಗೆ ವಂಚಿಸಲಾಗುತ್ತಿತ್ತು. ಗೋದಾಮಿನಲ್ಲಿ 218 ಬಾಕ್ಸ್‌ಗಳಲ್ಲಿ 3,030 ಥ್ರೆಡ್‌ ಸಾಕೆಟ್‌ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿತ್ತು. ಅವುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.