ADVERTISEMENT

ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ವೇಲಣಕರ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 20:40 IST
Last Updated 22 ಡಿಸೆಂಬರ್ 2021, 20:40 IST
ಲಕ್ಷ್ಮಣದಾಸ್ ವೇಲಣಕರ್
ಲಕ್ಷ್ಮಣದಾಸ್ ವೇಲಣಕರ್   

ಬೆಂಗಳೂರು: ಆಧ್ಯಾತ್ಮಿಕ ಚಿಂತಕ ಹಾಗೂ ಪ್ರವಚನಕಾರ ಲಕ್ಷ್ಮಣದಾಸ್ ವೇಲಣಕರ್ (82) ಅವರು ಬುಧವಾರ ನಿಧನರಾದರು.ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆಪತ್ನಿ ಹಾಗೂ ಪುತ್ರ ಇದ್ದಾರೆ‌. ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ವೇಲಣಕರ್‌ ಅವರು, ಹರಿಕಥಾ ವಿದ್ವಾಂಸ ಸಂತ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸ ಅವರ ಶಿಷ್ಯರಾಗಿದ್ದರು. ಹರಿಕಥಾ ಪರಂಪರೆಗೆ ಮಹತ್ತರ ಕೊಡುಗೆ ನೀಡಿದ ಅವರು,ಗೋರಖ್‌ಪುರದ ಗೀತಾ ಪ್ರೆಸ್‌ನ ನೂರಕ್ಕೂ ಅಧಿಕ‌ ಆಧ್ಯಾತ್ಮಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.

ಷಡ್ಜ ಕಲಾ ಕೇಂದ್ರವನ್ನು ಸ್ಥಾಪಿಸಿ, ಆಧ್ಯಾತ್ಮಿಕ, ಸಂಗೀತ ಹಾಗೂ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.