ಬೆಂಗಳೂರು: ‘ಸೇವೆ ಬದುಕಿನ ಅವಿಭಾಜ್ಯ ಅಂಗ. ಸಮಾಜದ ಉನ್ನತಿಯೇ ನಮ್ಮ ಬದುಕಿನ ಗುರಿಯಾಗಬೇಕು’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದ ಕೆಂಗೇರಿಯ ಬೆಂಗಳೂರು ಹಾಸ್ಪಿಟಲ್ಸ್‌ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ನಡೆದ ವೈದ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ವೈದ್ಯರಿಗೆ ಸಮಾಜದಲ್ಲಿ ಬಹಳ ಉನ್ನತ ಸ್ಥಾನವಿದೆ. ಅದಕ್ಕೆ ಕುಂದುಂಟಾಗದಂತೆ ನಾವು ಸೇವೆ ಸಲ್ಲಿಸಬೇಕು. ಬಡವರ, ಮಧ್ಯಮ ವರ್ಗದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಬೇಕು’ ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಸುರಪಾನೇನಿ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಲಹರಿ ಸುರಪಾನೇನಿ, ವೈದ್ಯಕೀಯ ನಿರ್ದೇಶಕ ಡಾ. ಅಭಿಷೇಕ್ ಮನ್ನೆಮ್, ಸಿಟಿ ಇನ್‌ಸ್ಟಿಟ್ಯೂಟ್ ಉಪಾಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.