ADVERTISEMENT

ಶಾದಿ ಮಹಲ್‌ ಶಾಫ್ಟ್‌ನಲ್ಲಿ ‘ಭದ್ರ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 20:19 IST
Last Updated 16 ಡಿಸೆಂಬರ್ 2022, 20:19 IST
‘ಭದ್ರ’ ಯಂತ್ರವು ಶಾದಿ ಮಹಲ್‌ ಶಾಫ್ಟ್‌ನಲ್ಲಿ ಶುಕ್ರವಾರ ಹೊರಬಂದಿತು.
‘ಭದ್ರ’ ಯಂತ್ರವು ಶಾದಿ ಮಹಲ್‌ ಶಾಫ್ಟ್‌ನಲ್ಲಿ ಶುಕ್ರವಾರ ಹೊರಬಂದಿತು.   

ಬೆಂಗಳೂರು: ಸುರಂಗ ಕೊರೆಯುವ ಯಂತ್ರ ‘ಭದ್ರ’ ಶಾದಿ ಮಹಲ್‌ ಶಾಫ್ಟ್‌ನಲ್ಲಿ ಶುಕ್ರವಾರ ಹೊರಬಂದಿದೆ.

ಈ ಯಂತ್ರವು 2021ರ ಜೂನ್‌ 24ರಂದು ವೆಂಕಟೇಶಪುರ ನಿಲ್ದಾಣದಲ್ಲಿ ಆರಂಭಿಸಿ 540 ದಿನಗಳಲ್ಲಿ 1066.80 ಮೀಟರ್‌ ಸುರಂಗವನ್ನು ಕೊರೆದಿದೆ. ಶುಕ್ರವಾರ ಮೊದಲನೇ ಸುರಂಗ ಕೊರೆಯುವ ಕಾಮಗಾರಿಯನ್ನು ಪೂರ್ಣಗೊಳಿಸಿ ಶಾದಿ ಮಹಲ್‌ ಶಾಫ್ಟ್‌ನಲ್ಲಿ ಹೊರಬಂದಿದೆ.

ಇನ್ನು ಮುಂದೆವೆಂಕಟೇಶಪುರದಿಂದ ಕೆ.ಜಿ. ಹಳ್ಳಿ ಮೆಟ್ರೊ ನಿಲ್ದಾಣಗಳ ನಡುವೆ ಸುರಂಗ ಕೊರೆಯುವ ಕಾಮಗಾರಿಗಾಗಿ ಈ ಟಿಬಿಎಂ ಅನ್ನು ನಿಯೋಜಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.