ADVERTISEMENT

ಬೆಂಗಳೂರು: ‘ನೆರಳು ರಹಿತ ದಿನ’ಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 15:51 IST
Last Updated 19 ಆಗಸ್ಟ್ 2023, 15:51 IST
‘ನೆರಳು ರಹಿತ ದಿನ’ಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು.
‘ನೆರಳು ರಹಿತ ದಿನ’ಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು.   

ಬೆಂಗಳೂರು: ಸೌರವ್ಯೂಹದಲ್ಲಿ ಅಪರೂಪಕ್ಕೊಮ್ಮೆ ಘಟಿಸುವ ‘ನೆರಳು ರಹಿತ ದಿನ’ಕ್ಕೆ ನಗರದ ರಾಜಾಜಿನಗರದ ವೆಂಕಟ್, ಸೇಂಟ್ ಆನ್ಸ್ ಮತ್ತು ವೀನಸ್ ಶಾಲೆಯ ವಿದ್ಯಾರ್ಥಿಗಳು ಶನಿವಾರ ಸಾಕ್ಷಿಯಾದರು.

ಈ ವರ್ಷದ 2ನೇ ‘ನೆರಳು ರಹಿತ ದಿನ’ ಇದಾಗಿತ್ತು. ಏಪ್ರಿಲ್ 24 ಹಾಗೂ 25ರಲ್ಲಿಯೂ ಈ ಘಟನೆ ಸಂಭವಿಸಿತ್ತು.

ಶನಿವಾರ ಮಧ್ಯಾಹ್ನ 12.24ಕ್ಕೆ ತಮ್ಮ ನೆರಳೇ ತಮಗೆ ಕಾಣದಂತಾಗುವ ರೋಮಾಂಚಕ ದೃಶ್ಯಗಳನ್ನು ನೋಡಿ ವಿದ್ಯಾರ್ಥಿಗಳು ಸಂಭ್ರಮಪಟ್ಟರು. ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಆವರಣದಲ್ಲಿ ವಿವಿಧ ವಿನ್ಯಾಸ ರೂಪಿಸಲಾಗಿತ್ತು.

ADVERTISEMENT

ಸಂಸ್ಥೆಯ ಅಧ್ಯಕ್ಷ ಟಿ. ಬಾಲಕೃಷ್ಣ, ಉಪಾಧ್ಯಕ್ಷ ಬಿ. ವೆಂಕಟೇಶ್, ನಿರ್ದೇಶಕ ಬಿ. ಶೇಖರ್, ಪ್ರಾಂಶುಪಾಲರಾದ ಸುಲೋಚನಾ ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ಶ್ರೀಮತಿ ಅಲಂಕೃತ, ಸುಭಿಕ್ಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.