ADVERTISEMENT

ಹಳ್ಳಿಗಳಿಗೆ ತಲುಪದ ಸೌಲಭ್ಯ: ವಿಷಾದ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 20:47 IST
Last Updated 16 ಫೆಬ್ರುವರಿ 2020, 20:47 IST
ನಗರದಲ್ಲಿ ಶನಿವಾರ ಸೇಂಟ್‌ ಜಾನ್ಸ್‌ ನ್ಯಾಷ‌ನಲ್‌ ಅಕಾಡೆಮಿ ಆಫ್ ಹೆಲ್ತ್‌ ಸೈನ್ಸ್‌ ಸಂಸ್ಥೆಯ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಸೇಂಟ್‌ ಜಾನ್ಸ್‌ ನ್ಯಾಷ‌ನಲ್‌ ಅಕಾಡೆಮಿ ಆಫ್ ಹೆಲ್ತ್‌ ಸೈನ್ಸ್‌ ಸಂಸ್ಥೆಯ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶವು 21 ಶತಮಾನದಲ್ಲಿ ದಾಪುಗಾಲಿಟ್ಟಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ನುರಿತ ವೈದ್ಯರ ಸೇವೆ ಇಂದಿಗೂ ಸಮರ್ಪಕವಾಗಿಲ್ಲ. ಇದರಿಂದ ಬಡವರು, ವಂಚಿತರು ಮತ್ತು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೇವೆಯಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ’ ಎಂದು ಸಂಸದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದರು.

ಸೇಂಟ್‌ ಜಾನ್ಸ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಪದವಿ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂದಿನ ವೈದ್ಯರು ತಮ್ಮ ಮುಂದಿರುವ ತಾಂತ್ರಿಕ ನೈಪುಣ್ಯತೆ, ಕೃತಕ ಬುದ್ಧಿಮತ್ತೆ, ರೊಬೋಟ್‌ಗಳ ಬಳಕೆಯಂತಹ ಹತ್ತು ಹಲವು ಸವಾಲು ಗಳಿಗೆ ಎದೆಯೊಡ್ಡಬೇಕಿದೆ’ ಎಂದರು.

‘ಸಾಮಾಜಿಕ ತಲ್ಲಣಗಳು ವ್ಯಾಪಕವಾಗಿ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ ವೈದ್ಯ ಎಂಬ ಪದವಿ ನಿಮ್ಮನ್ನು ಸಮಸ್ತ ಮಾನವೀಯತೆ ಕಡೆಗೆ ಕರೆದುಕೊಂಡು ಹೋಗಲಿ. ಬಹುತ್ವದ ತಳಹದಿ ಹೊಂದಿದ ನಮ್ಮ ಪ್ರಜಾಪ್ರಭುತ್ವದ ಪ್ರಗತಿ ಮತ್ತು ಸಂಪತ್ತು ವೃದ್ಧಿಗಾಗಿ ನಿಮ್ಮ ಸೇವೆ ಮುಡಿಪಾಗಿರಲಿ. ವೃತ್ತಿ ಮೌಲ್ಯಗಳು ಮತ್ತು ನೈತಿಕ ನಿಯಮಗಳನ್ನು ಎತ್ತಿಹಿಡಿಯಿರಿ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.